217
ಕುಂಭಾಸಿ : ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನದಲ್ಲಿ ನಿನ್ನೆ ಸೋಮವಾರ ಸಂಕಷ್ಟಹರ ಚತುರ್ಥಿ ಪ್ರಯುಕ್ತ ಶ್ರೀ ದೇವರಿಗೆ ವಿಶೇಷ ಪೂಜೆಯೊಂದಿಗೆ ಲೋಕ ಕಲ್ಯಾಣಾರ್ಥ ಗಣಹೋಮ ಸೇವೆ ನಡೆಯಿತು.
ಈ ಸಂದರ್ಭ ಶ್ರೀ ದೇವರಿಗೆ ವಿಶೇಷ ಅಲಂಕಾರ, ಅಭಿಷೇಕ, ಸತ್ಯಗಣಪತಿ ವ್ರತ ಸಹಿತ ಮಹಾಪೂಜೆಯೊಂದಿಗೆ ಹೋಮ ಹವನಾದಿಗಳು ಸೇರಿದಂತೆ ರಾತ್ರಿ ಮಹಾ ರಂಗ ಪೂಜೆಯೊಂದಿಗೆ ರಜತ ರಥೋತ್ಸವ ಜರುಗಿತು ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಶ್ರದ್ಧಾ ಭಕ್ತಿಯಿಂದ ಪಾಲ್ಗೊಂಡು ಪುನೀತ ರಾದರು.
ದೇವಳದ ಅನುವಂಶಿಕ ಆಡಳಿತ ಮೊಕ್ತಸರರಾದ ಕೆ.ಶ್ರೀರಮಣ ಉಪಾಧ್ಯಾಯ, ವಿಶ್ರಾಂತ ಆಡಳಿತ ಮೊಕ್ತಸರರಾದ ಕೆ. ಸೂರ್ಯನಾರಾಯಣ ಉಪಾಧ್ಯಾಯ, ದೇವಳದ ಮೊಕ್ತಸರಾದ ಕೆ.ಪದ್ಮನಾಭ ಉಪಾಧ್ಯಾಯ, ಕೆ.ನಿರಂಜನ ಉಪಾದ್ಯಾಯ, ಪರ್ಯಾಯ ಅರ್ಚಕರಾದ ಕೆ.ವ್ಯಾಸ ಉಪಾಧ್ಯಾಯ ಮತ್ತು ಸಹೋದರರು, ಅರ್ಚಕ ಮಂಡಳಿ ಸದಸ್ಯರು, ದೇವಳದ ವ್ಯವಸ್ಥಾಪಕರಾದ ನಟೇಶ್ ಕಾರಂತ್ ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.

