Home » ಆನೆಗುಡ್ಡೆ ದೇಗುಲದಿಂದ ವೈದ್ಯಕೀಯ ನೆರವು ಕಾರ್ಯಕ್ರಮ
 

ಆನೆಗುಡ್ಡೆ ದೇಗುಲದಿಂದ ವೈದ್ಯಕೀಯ ನೆರವು ಕಾರ್ಯಕ್ರಮ

ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನ

by Kundapur Xpress
Spread the love

ಕುಂಭಾಸಿ : ಕಳೆದ 37 ವರ್ಷಗಳಿಂದ ಆನೆಗುಡ್ಡೆ ದೇಗುಲದ ಅಭಿವೃದ್ಧಿಯ ಜತೆಗೆ ಇತರ  ಧಾರ್ಮಿಕ ಕೇಂದ್ರ, ಶೈಕ್ಷಣಿಕ ಸಂಸ್ಥೆ ಸೇರಿದಂತೆ ಅಶಕ್ತ ರೋಗಿಗಳ ವೈದ್ಯಕೀಯ ನೆರವಿಗಾಗಿ ಧನ ಸಹಾಯವನ್ನು ನೀಡುತ್ತಾ ಬಂದಿದ್ದು ಈ ಭಾರಿ ಪ್ರತಿಯೊಬ್ಬರಿಗೂ 10 ಸಾವಿರ ರೂಪಾಯಿಯಂತೆ ಮೊದಲ ಹಂತದಲ್ಲಿ 70 ಮಂದಿಗೆ ಸುಮಾರು 7 ಲಕ್ಷ ರೂಪಾಯಿ ಮೊತ್ತದ ಸಹಾಯ ಧನದ ಚೆಕ್ ವಿತರಿಸಲಾಗಿದೆ ಎಂದು ವಿಶ್ರಾಂತ ಆಡಳಿತ ಧರ್ಮದರ್ಶಿ  ಕೆ.ಸೂರ್ಯನಾರಾಯಣ ಉಪಾಧ್ಯಾಯ ಅವರು ಹೇಳಿದರು

1987ರಿಂದ ನಮ್ಮ ಹಿರಿಯರಾದ ಕೆ.ಲಕ್ಷ್ಮೀನಾರಾಯಣ ಉಪಾಧ್ಯಾಯ ಅವರು ಸಣ್ಣ ಮಟ್ಟದಿಂದ ಆರಂಭಿಸಿದ ಈ ಕಾರ್ಯಕ್ರಮ ಇದೀಗ ವರ್ಷದಲ್ಲಿ 2 ಭಾರಿ ಆಯೋಜಿಸುತ್ತಿದ್ದೇವೆ ಎಂದರು ಅವರು ನಿನ್ನೆ ಅಗಸ್ಟ್‌ 7ರಂದು ಬುಧವಾರ ಕುಂಭಾಶಿ ಆನೆಗುಡ್ಡೆ ಶ್ರೀ ವಿನಾಯಕ ದೇಗುಲದ ವತಿಯಿಂದ 2024-25ನೇ ಸಾಲಿನ ಪ್ರಥಮ ಹಂತದ ಅಶಕ್ತ ಫಲಾನುಭವಿಗಳಿಗಾಗಿ ನಡೆದ ವೈದ್ಯಕೀಯ ನೆರವು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.

ಕುಂಭಾಶಿ ಆನೆಗುಡ್ಡೆ ಶ್ರೀ ವಿನಾಯಕ ದೇಗುಲದ ಆಡಳಿತ ಧರ್ಮದರ್ಶಿ ಕೆ.ಶ್ರೀರಮಣ ಉಪಾಧ್ಯಾಯ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಪರ್ಯಾಯ ಅರ್ಚಕ ಕೆ.ಕೃಷ್ಣಾನಂದ ಉಪಾಧ್ಯಾಯ ಮತ್ತು ಸಹೋದರರು, ಅರ್ಚಕ ಮಂಡಳಿಯ ಸರ್ವ ಸದಸ್ಯರು ಹಾಗೂ ಸಿಬಂದಿ ವರ್ಗದವರು ಉಪಸ್ಥಿತರಿದ್ದರು. ಕೆ.ರಾಜಾರಾಮ ಉಪಾಧ್ಯಾಯ ಸ್ವಾಗತಿಸಿ, ದೇವಳದ ವ್ಯವಸ್ಥಾಪಕ ನಟೇಶ್ ಕಾರಂತ್ ವಂದಿಸಿದರು.

   

Related Articles

error: Content is protected !!