Home » ಶೃಂಗಾರದ ಸಿರಿಯಲ್ಲಿ ತಾಯಿ ಬಗಳಾಂಬ ಪುನಃಪ್ರತಿಷ್ಠೆ
 

ಶೃಂಗಾರದ ಸಿರಿಯಲ್ಲಿ ತಾಯಿ ಬಗಳಾಂಬ ಪುನಃಪ್ರತಿಷ್ಠೆ

by Kundapur Xpress
Spread the love

ಕುಂದಾಪುರ : ನಗರದ ಚಿಕ್ಕಮ್ಮನ ಸಾಲು ರಸ್ತೆಯು ಕೇಸರಿ ಪತಾಕೆ ಕೇಸರಿ ಧ್ವಜಗಳಿಂದ ರಾರಾಜಿಸುತ್ತಿದ್ದು ವಿದ್ಯುತ್‌ ದೀಪಲಂಕಾರ ಹಾಗೂ ಪುಷ್ಪಲಂಕಾರಗಳಿಂದ ಶೃಂಗಾರಗೊಂಡ ಬಗಳಾಂಬ ತಾಯಿ ದೇಗುಲದಲ್ಲಿ ಸಕಲ ವೈದಿಕ ಹಾಗೂ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಶ್ರೀ ಗುರು ಪರಾಶಕ್ತಿ ಮಠ-ಮರಕಡದ ಶ್ರೀ ನರೇಂದ್ರನಾಥ ಯೋಗೇಶ್ವರೇಶ್ವರ ಸ್ವಾಮಿಗಳ ಆಶೀರ್ವಾದದೊಂದಿಗೆ ವಿದ್ವಾನ್ ಕೋಟ ಕೆ. ಚಂದ್ರಶೇಖರ್ ಸೋಮಯಾಜಿ ನೇತೃತ್ವದಲ್ಲಿ  ಬಗಳಾಂಬ ದೇವಿಯ ಪುನಃಪ್ರತಿಷ್ಠೆ ಮತ್ತು ಗರ್ಭಗುಡಿಗೆ ರಜತದ್ವಾರ ಸಮರ್ಪಣೆಯು ಸಡಗರ ಸಂಭ್ರಮದಿಂದ ಸಂಪನ್ನಗೊಂಡಿತು

ಫೆಬ್ರವರಿ 22ರಂದು ಪುಣ್ಯಾಹ, ಬೆಳಗ್ಗೆ 5.20ಕ್ಕೆ ಮಕರ ಲಗ್ನಸುಮುಹೂರ್ತದಲ್ಲಿ ರತ್ನನ್ಯಾಸಪೂರ್ವಕ ಶ್ರೀ ಬಗಳಾಂಬ ತಾಯಿಯ ಪುನರ್ ಪ್ರತಿಷ್ಠೆ ಜೀವ ಕುಂಭಾಭಿಷೇಕಪ್ರಾಣ ಪ್ರತಿಷ್ಠೆ ಕಲಾಭಿವೃದ್ಧಿ ಹೋಮ, ಪ್ರಾಯಶ್ಚಿತ್ತ ಹೋಮ, ಕಲಶಾಭಿಷೇಕ, ಮಹಾಪೂಜೆ, ಪ್ರಸಾದ ವಿತರಣೆ ಹಾಗೂ ಮಧ್ಯಾಹ್ನ 12.30ಕ್ಕೆ ಸಾರ್ವಜನಿಕ ಅನ್ನ ಸಂತರ್ಪಣೆ ಕಾರ್ಯಕ್ರಮ ನಡೆಯಿತು.

ಸಂಜೆ 5ಕ್ಕೆ ಪುಣ್ಯಾಹ, ಶಾಂತಿಹೋಮ, ನವೋತ್ತರ ದ್ರವ್ಯಕಲಶಪೂರಿತ ಬ್ರಹ್ಮಕಲಶ ಸ್ಥಾಪನೆ, ಪ್ರದಾನಾಧಿವಾಸ ಹೋಮ ಜರುಗಿತು

ರಾತ್ರಿ 8.00 ಕ್ಕೆ ಶ್ರೀ ನವಿಯಕ್ಷ ಬಳಗ ಕೋಟ ಹಾಗೂ ಅತಿಥಿ ಕಲಾವಿದರ ಕೂಡುವಿಕೆಯಲ್ಲಿ ಚಕ್ರ – ಚಂಡಿಕೆಯಕ್ಷಗಾನ ಪ್ರದರ್ಶನಗೊಂಡಿತು

   

Related Articles

error: Content is protected !!