Home » ಕೋಡಿ ಚಕ್ರಮ್ಮ ದೇವಸ್ಥಾನ : ಗೆಂಡ ಮಹೋತ್ಸವ
 

ಕೋಡಿ ಚಕ್ರಮ್ಮ ದೇವಸ್ಥಾನ : ಗೆಂಡ ಮಹೋತ್ಸವ

by Kundapur Xpress
Spread the love

ಕುಂದಾಪುರ : ಕೋಡಿ ಚಕ್ರಮ್ಮ ದೇವಸ್ಥಾನದಲ್ಲಿ ಫೆ.7,8ರಂದು ವಾರ್ಷಿಕ ಗಂಡಸೇವೆ ಜಾತ್ರೆ, ಹಾಲು ಹಬ್ಬ ನಡೆಯಲಿದೆ. ಫೆ.7ರಂದು ದೇವಿದರ್ಶನ, ಚಕ್ರಮ್ಮ ವಾರ್ಷಿಕ ಕೆಂಡ ಸೇವೆ, ರಾತ್ರಿ ಗಿಚ್ಚಿಗಿಲಿ ಗಿಲಿ ಮತ್ತು ಕಾಮಿಡಿ ಕಿಲಾಡಿ ಕಲಾವಿದರಿಂದ ನಗೆ ಹಬ್ಬ, ಚಲನ ಚಿತ್ರ ನಿರ್ದೇಶನ ತಂಡದಿಂದ ಡ್ಯಾನ್ಸ್ ಧಮಾಕ, ಪ್ರಸಿದ್ಧ ಕಲಾವಿದರ ಸಂಗೀತ ಸಂಜೆ ನಡೆಯಲಿದೆ.

ಫೆ.8 ರಂದು ದರ್ಶನ, ಢಕ್ಕೆಮಂಡಲ, ಮೈದಾಳಿ ದೇವಿಗೆ ಹಾಲು ಹಬ್ಬ ಅನ್ನ ಸಂತರ್ಪಣೆ ನಡೆಯಲಿದ್ದು ರಾತ್ರಿ ಮಾರಣಕಟ್ಟೆ ಮೇಳದಿಂದ ಯಕ್ಷಗಾನ ಪಾಪಣ್ಣ ವಿಜಯ ಪ್ರದರ್ಶನಗೊಳ್ಳಲಿದೆ ಎಂದು ಚಕ್ರಮ್ಮ ದೇವಸ್ಥಾನ ಟ್ರಸ್ಟ್‌ ಇದರ ಅಧ್ಯಕ್ಷರಾದ ಕೋಡಿ ಗೋಪಾಲ ಪೂಜಾರಿಯವರು ತಿಳಿಸಿದ್ದಾರೆ 

 

Related Articles

error: Content is protected !!