Home » ಶ್ರೀಚಕ್ರ ಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರ
 

ಶ್ರೀಚಕ್ರ ಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರ

by Kundapur Xpress
Spread the love

ಉಡುಪಿ : ದೊಡ್ಡಣ್ಣ ಗುಡ್ಡೆಯ ಶ್ರೀ ಚಕ್ರ ಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಕಾರಣಿಕ ಕ್ಷೇತ್ರದ ಕಪಿಲ ಮಹರ್ಷಿಗಳ ದಿವ್ಯ ಸನ್ನಿಧಾನವಾದ ಗಾಯತ್ರಿ ಧ್ಯಾನಪೀಠದಲ್ಲಿ ನೂತನವಾಗಿ ರಚಿಸಲಾದ ಶಿಲಾಮಯ ಗುಡಿಯಲ್ಲಿ ಪಂಚಮುಖಿ ಗಾಯತ್ರಿ ದೇವಿಯ ಶಿಲಾಬಿಂಬ ಪ್ರತಿಷ್ಠಾಪನೆಯು ಶ್ರೀ ಶ್ರೀ ಸ್ವಯಂಪ್ರಕಾಶ ಸಚ್ಚಿದಾನಂದ ಸರಸ್ವತಿ ಮಹಾಸ್ವಾಮಿಗಳು ಶ್ರೀ ಆದಿ ಶಂಕರಾಚಾರ್ಯ ಶಾರದಾ ಲಕ್ಷ್ಮಿ ನರಸಿಂಹ ಪೀಠ ಹರಿ ದಿವ್ಯ ಕ್ಷೇತ್ರ ಶ್ರೀ ಹರಿಹರಪುರ ಹಾಗೂ ಕ್ಷೇತ್ರದ ಧರ್ಮದರ್ಶಿ ಶ್ರೀಯುತ ಶ್ರೀ ಶ್ರೀ ರಮಾನಂದ ಗುರೂಜಿ ಯವರ ದಿವ್ಯ ಉಪಸ್ಥಿತಿಯಲ್ಲಿ ನೆರವೇರಲಿದೆ
ಆ ಪ್ರಯುಕ್ತಇದೇ ತಿಂಗಳ ತಾರೀಕು 30 ಬುದವಾರ ಮೊದಲ್ಗೊಂಡು ಮೇ 4ರ ಭಾನುವಾರದ ತನಕ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಹಾಗೂ ಸಭಾ ಕಾರ್ಯಕ್ರಮಗಳು ಸಂಪನ್ನಗೊಳ್ಳಲಿವೆ..

ತಾರೀಕು 30ರ ಬೆಳಿಗ್ಗೆ ಗಂಟೆ 8.00 ರಿಂದ ಋತ್ವಿಜರ ಸ್ವಾಗತ ಸಾಮೂಹಿಕ ದೇವತಾ ಪ್ರಾರ್ಥನೆ, ಅರಣೀಮ ಥನ ತೋರಣಮುಹೂರ್ತ ಉಗ್ರಾಣಮಹೂರ್ತ ಆಲಯ ಪ್ರತಿಗ್ರಹ ಆದ್ಯ ಗಣಪತಿಯಾಗ ನವಗ್ರಹ ಯಾಗ ಮೃತ್ಯುಂಜಯ ಯಾಗ
ಹಾಗೂ ಸಾಯಂಕಾಲ ಗಂಟೆ 6.00 ರಿಂದ ನೂತನ ಆಲಯದಲ್ಲಿ ಸಪ್ತಶುದ್ಧಿ ಪ್ರಸಾದ ಶುದ್ದಿ ಪಂಚಮೂರ್ತಿ ಆರಾಧನೆ ಸಹಿತ ವಿಪ್ರೋಚಿಷ್ಟ, ರತ್ನನ್ಯಾಸ ಭೂವರಹ ಮಂತ್ರ ಹೋಮ ಪ್ರಕ್ರಿಯೆ, ಅಷ್ಟಬಂಧ ಆಧಿವಾಸ ಪೀಠಾಧಿವಾ ಸ, ಸಪ್ತಾಧಿವಾಸ ಪೂಜೆ, ಅಷ್ಟಾವಧಾನ ಸೇವೆ,
ತಾರೀಕು 01ರಗುರುವಾರ ಬೆಳಿಗ್ಗೆ ಗಂಟೆ 6.00ರಿಂದ ಪಂಚಗವ್ಯ ಪುಣ್ಯಾಹ ಸರ್ವ ಪ್ರಾಯಶ್ಚಿತ್ತ ಪವಮಾನ ಸೂಕ್ತ ಯಾಗ ಬೆಳಿಗ್ಗೆ 7.00ಕ್ಕೆ ದಿವ್ಯ ಕ್ಷೇತ್ರ ಶ್ರೀ ಹರಿಹರಪುರ ಕ್ಷೇತ್ರದ ಪೀಠಾಧಿಪತಿಗಳಿಗೆ ಸುಮಂಗಲಿ ಯರಿಂದ ಪೂರ್ಣ ಕುಂಭ ಸ್ವಾಗತ,
ಪ್ರಾತಃಕಾಲ ಒದಗುವ 8.00ಕ್ಕೆ ಒದಗುವ ವೃಷಭ ಲಗ್ನ ಸುಮೂಹೂ ರ್ತದಲ್ಲಿ ಅಷ್ಟ ಬಂಧ ಸಹಿತ ಪಂಚಮುಖಿ ಗಾಯತ್ರಿ ದೇವಿಯ ಶಿಲಾ ಬಿಂಬ ಪ್ರತಿಷ್ಠೆ,ನ್ಯಾಸ ವಿಧಿ ಪ್ರತಿಜ್ಞಾವಿಧಿ ಮೇಧಾಸಿದ್ದಿ ಗಾಯತ್ರಿ ಯಾಗ ಪ್ರಸನ್ನ ಪೂಜೆ, ಪಲ್ಲ ಪೂಜೆ ಹಾಗೂ ಮಹಾ ಅನ್ನಸಂತರ್ಪಣೆ ಜರುಗಲಿದೆ
ಸಾಯಂಕಾಲ ಗಂಟೆ 6.00 ರಿಂದ ಗಾಯತ್ರಿ ಕಲ್ಪೋಕ್ತ ಪೂಜೆ,ವೇದ ಮಾರ್ಗಪ್ರದ ಗಾಯತ್ರಿ ಷಟ್ಚಕ್ರ ಆರಾಧನೆ,
ತಾರೀಕು 02ರ ಶುಕ್ರವಾರದಂದು ಬೆಳಿಗ್ಗೆ ಗಂಟೆ 8.00 ರಿಂದ ಕಲಾತತ್ವ ಹೋಮ ತತ್ವ ಕಲಶಾಭಿಷೇಕ ಶ್ರೀ ಗಾಯತ್ರಿ ಸಹಸ್ರನಾಮ ಮಹಾಯಾಗ ಮಹಾ ಅನ್ನಸಂತರ್ಪಣೆ
ಸಾಯಂಕಾಲ ಗಂಟೆ 6.00ರಿಂದ ಶ್ರೀ ಸಾವಿತ್ರಿ ಕಲ್ಪೋಕ್ತ ಪೂಜೆ ರಕ್ಷಾ ಪ್ರದಸಾವಿತ್ರಿ ಪೂಜೆ ಕಾಲಚಕ್ರ ನಿಯಾಮಕ ಸಾವಿತ್ರಿ ಆರಾಧನೆ, ಅಷ್ಟಾವಧಾನ ಸೇವೆ
ತಾರೀಕು 03ರ ಶನಿವಾರದಂದು ಬೆಳಿಗ್ಗೆ ಗಂಟೆ 8.00ರಿಂದ ಶಾಕಲಾ ಋಕ್ ಸಂಹಿತ ಪಾರಾಯಣ ಆಗ್ನೇಯಾಸ್ರ ಮಂತ್ರ ಯಾಗ,ಐಕ್ಯ ಮತ್ಯ ಭಾಗ್ಯ ಸೂಕ್ತ ಹೋಮ ಅನ್ನಸಂತರ್ಪಣೆ
ಸಾಯಂಕಾಲ ಗಂಟೆ 6.00ರಿಂದ ಸರಸ್ವತಿ ಕಲ್ಪೋಕ್ತ ಪೂಜೆ ಬಾಲ ಸರಸ್ವತಿ ಪೂಜೆ ಸರಸ್ವತಿ ಆರಾಧನೆ ಅಧಿವಾಸ ಹೋಮ ಪಂಚವಿಂಶತಿ ದ್ರವ್ಯ ಮೀಳಿತ ಏಕೋತ್ತರ ತ್ರಿಶತ ಬ್ರಹ್ಮಕಲಶಾ ಧಿವಾಸ,
ತಾರೀಕು 04ರ ಭಾನುವಾರ ಬೆಳಿಗ್ಗೆ ಗಂಟೆ ಏಳರಿಂದ ಪಂಚಗವ್ಯ ಪುಣ್ಯಾಹ ಮಂಗಳ ಗಣಯಾಗ ಪಂಚಾಮೃತ ಅಭಿಷೇಕ, ಋಕ್ ಸಂಹಿತ ಅಭಿಮಂತ್ರಿತ ಮಧು ಅಭಿಷೇಕ,
ಬೆಳಿಗ್ಗೆ 8.40ಕ್ಕೆ ಒದಗುವ ವೃಷಭ ಲಗ್ನ ಸುಮಹೂರ್ತದಲ್ಲಿ ಪಂಚವಿ ವಿಂಶತಿ ದ್ರವ್ಯ ಮೀಳಿತ ಏಕೋತ್ತರ ತ್ರಿಶತ ಬ್ರಹ್ಮಕುಂಭಾಭಿಷೇಕ,, ಸೌರ ಸೂಕ್ತ ಹೋಮ ವ್ಯಾಸ ಪೂಜೆ ಮಹಾಪೂಜೆ, ಪಲ್ಲಪೂಜೆ ಮಹಾ ಅನ್ನಸಂತರ್ಪಣೆ ನೆರವೇರಲಿದೆ ಹಾಗೂ ಸಭಾ ಕಾರ್ಯಕ್ರಮ ನಡೆಯಲಿದೆ ಈ ಧಾರ್ಮಿಕ ಸಭೆಯಲ್ಲಿ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿದ ಹಾಗೂ ಸಮಾಜಮುಖಿಯಾಗಿ ಸೇವೆ ಸಲ್ಲಿಸಿದವರನ್ನು ಗುರುತಿಸಿ ಸನ್ಮಾನಿಸಲಾಗುವುದು ಎಂದು ಕ್ಷೇತ್ರ ಉಸ್ತುವಾರಿ ಶ್ರೀಮತಿ ಕುಸುಮ ನಾಗರಾಜ್ ತಿಳಿಸಿರುತ್ತಾರೆ

 

Related Articles

error: Content is protected !!