204
ಇಂದು ಸ್ವರ್ಣ ಪಲ್ಲಕ್ಕಿ ಪುರಪ್ರವೇಶ
ಕುಂದಾಪುರ: ಇಲ್ಲಿನ ಪೇಟೆ ಶ್ರೀ ವೆಂಕಟರಮಣ ದೇವರಿಗೆ ಸಮರ್ಪಣೆಯಾಗಲಿರುವ ಸ್ವರ್ಣ ಪಲ್ಲಕ್ಕಿಯ ಶೋಭಾಯಾತ್ರೆಯು ಮಧ್ಯಾಹ್ನ 2.00 ಕ್ಕೆಉಡುಪಿಯ ಆಭರಣ ಜ್ಯುವೆಲ್ಲರ್ಸ್ ನಿಂದ ಹೊರಟು ಸಂಜೆ 6.00 ಕ್ಕೆ ಕುಂದಾಪುರದ ಶಾಸ್ತ್ರೀಪಾರ್ಕ್ ತಲುಪಲಿದೆ
ಸಂಜೆ 6.00 ಕ್ಕೆ ಸ್ವರ್ಣ ಪಲ್ಲಕ್ಕಿಯನ್ನು ಶಾಸ್ತ್ರಿಸರ್ಕಲ್‍ನಲ್ಲಿ ಸ್ವಾಗತಿಸಿ ಪುರಮೆರವಣಿಗೆಯೊಂದಿಗೆ ದೇವಸ್ಥಾನಕ್ಕೆ ಕೊಂಡೊಯ್ಯಲಾಗುತ್ತದೆ. 19ಕ್ಕೆ ಸ್ವರ್ಣ ಪಲ್ಲಕ್ಕಿ ಸಮರ್ಪಣೆ ನಡೆಯಲಿದೆ. ಮಧ್ಯಾಹ್ನ 3.00 ಕ್ಕೆ ಶ್ರೀ ಸಂಸ್ಥಾನ ಕಾಶೀ ಮಠಾಧೀಶ ಶ್ರೀಮದ್ ಸಂಯಮೀಂದ್ರ ತೀರ್ಥ ಸ್ವಾಮೀಜಿಯವರು ಸ್ವರ್ಣ ಪಲ್ಲಕ್ಕಿ ಯನ್ನು ಶ್ರೀ ದೇವರಿಗೆ ಸಮರ್ಪಿಸಲಿದ್ದಾರೆ. ದಿನಾಂಕ 20ರಂದು ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ ಎಂದು ದೇವಳದ ಆಡಳಿತ ಮೊಕ್ತೇಸರರಾದ ಕೆ. ರಾಧಾಕೃಷ್ಣ ಶೆಣೈ ತಿಳಿಸಿದ್ದಾರೆ.

