150
ಕುಂದಾಪುರ : ಬ್ಯಾಂಕ್ ಆಫ್ ಬರೋಡ ಸಳ್ವಾಡಿ ಶಾಖೆ ಸಂಸ್ಥಾಪಕರ ದಿನಾಚರಣೆ ಅಂಗವಾಗಿ ಕಾಳಾವರ ಶ್ರೀ ಮಹಾಲಿಂಗೇಶ್ವರ ಮತ್ತು ಕಾಳಿಂಗ (ಸುಬ್ರಮಣ್ಯ) ದೇವಸ್ಥಾನಕ್ಕೆ ಅಗತ್ಯವಿರುವ ಕಾಣಿಕೆ ಹುಂಡಿಯನ್ನು ಕೊಡುಗೆಯಾಗಿ ಬ್ಯಾಂಕ್ ಆಫ್ ಬರೋಡ ಸಳ್ವಾಡಿ ಶಾಖೆ ವತಿಯಿಂದ ಹಸ್ತಾಂತರಿಸಲಾಯಿತು
ಬ್ಯಾಂಕ್‌ನ ವ್ಯವಸ್ಥಾಪಕ ಸುನಿಲ್ ಕುಮಾರ್ ಮತ್ತು ಸಿಬ್ಬಂದಿ ಭಾಸ್ಕರ್ ಪೂಜಾರಿ ಅವರು ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಅಜಿತ್ ಶೆಟ್ಟಿ, ಅಸೋಡು ಮತ್ತು ವ್ಯವಸ್ಥಾಪನ ಸಮಿತಿ ಸದಸ್ಯ ರಂಜಿತ್ ಕುಮಾರ್ ಶೆಟ್ಟಿ ಹಾಗೂ ಪ್ರಧಾನ ಅರ್ಚಕ ಸತ್ಯನಾರಾಯಣ ಪುರಾಣಿಕ ಅವರಿಗೆ ಹಸ್ತಾಂತರಿಸಿದರು.
ಅರ್ಚಕ ಚಂದ್ರಶೇಖರ್ ಹಾಗೂ ದೇವಳದ ವ್ಯವಸ್ಥಾಪಕ ಶ್ರೀನಾಥ್ ಕುಲಾಲ್ ಉಪಸ್ಥಿತರಿದ್ದರು.

