Home » ಧಾರ್ಮಿಕ ಪ್ರಜ್ಞೆಯತ್ತ ಯುವಕರು ಹೆಚ್ಚು ಅಸಕ್ತರಾಗಲಿ
 

ಧಾರ್ಮಿಕ ಪ್ರಜ್ಞೆಯತ್ತ ಯುವಕರು ಹೆಚ್ಚು ಅಸಕ್ತರಾಗಲಿ

- ಡಾ. ನಾಗೇಶ್‌

by Kundapur Xpress
Spread the love

ಕುಂದಾಪುರ : ಇತ್ತೀಚಿನ ದಿನಗಳಲ್ಲಿ ಧಾರ್ಮಿಕ ಆಚರಣೆಗಳಾದ ದೇಗುಲಗಳ ಪುನರ್‌ ಪ್ರತಿಷ್ಠೆ ವರ್ಧಂತಿ ಮಹೋತ್ಸವ ಹಾಗೂ ಉತ್ಸವಾದಿ ಕಾರ್ಯಕ್ರಮಗಳು ಸಂಪನ್ನಗೊಳ್ಳುತ್ತಿದ್ದು ಯುವಕರು ಧಾರ್ಮಿಕ ಪ್ರಜ್ಞೆಯತ್ತ ಹೆಚ್ಚು ಆಸಕ್ತರಾಗಿ ತಮ್ಮನ್ನು ತೊಡಗಿಸಿಕೊಳ್ಳಬೇಕೆಂದು ಕುಂದಾಪುರ ಸರಕಾರಿ ಆಸ್ಪತ್ರೆಯ ವೈದ್ಯಾಧಿಕಾರಿಗಳಾದ ಡಾ. ನಾಗೇಶ್‌ ಕರೆಯಿತ್ತರು

ಅವರು ನಗರದ ಚಿಕ್ಕನಸಾಲು ರಸ್ತೆಯ ರೋಯಲ್‌ ಸಭಾಭವನದ ಬಳಿಯ ಶ್ರೀ ನಾಗಬೊಬ್ಬರ್ಯ ಹಾಗೂ ಹೈಗುಳಿ ಸಪರಿವಾರ ದೇವಸ್ಥಾನದ ದಶಮಾನೋತ್ಸವ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಿ ಮಾತನಾಡಿದರು

ಮುಖ್ಯ ಅತಿಥಿಗಳಾಗಿ ಕುಂದೇಶ್ವರ ದೇಗುಲದ ಮಾಜಿ ಮೊಕ್ತೇಸರರು ಹಾಗೂ ರಾಣುಮಕ್ಕಿ ಶ್ರೀ ನಾಗಬೊಬ್ಬರ್ಯ ಬನದ ಅಧ್ಯಕ್ಷರಾದ  ಕೆ ಆರ್ ಉಮೇಶ್‌ ರಾವ್‌ ಮೈಲಾರೇಶ್ವರ ಯುವಕ ಮಂಡಲದ ಅಧ್ಯಕ್ಷ ಕೆ ಸಿ ಶರತ್‌ ಕುಮಾರ್‌ ರೋಯಲ್ ಕ್ಲಬ್‌ ಅಧ್ಯಕ್ಷ ಕೆ.ನಿತ್ಯಾನಂದ ದೇಗುಲದ ಸಮಿತಿಯ ಪ್ರಧಾನ ಕಾರ್ಯದರ್ಶಿ ಪ್ರಶಾಂತ್‌ ಮೊಗವೀರ ಕೋಶಾಧಿಕಾರಿ ರಮೇಶ್‌ ಪೂಜಾರಿ ಮೇಲ್‌ಹಿತ್ಲು ಹಾಗೂ ಗೌರವಾಧ್ಯಕ್ಷ ಸತೀಶ್‌ ಪೂಜಾರಿ ವೇದಿಕೆಯಲ್ಲಿ ಉಪಸ್ಥಿತರಿದ್ದರು

ದೇಗುಲದ ಸಮಿತಿ ಅಧ್ಯಕ್ಷರಾದ ಯು. ರಾಧಾಕೃಷ್ಣ ದಶಮಾನೋತ್ಸವ ಕಾರ್ಯಕ್ರಮದ ಮಾಹಿತಿಯನ್ನು ನೀಡಿದರು ಕಾರ್ಯಕ್ರಮದಲ್ಲಿ ಉಪಾಧ್ಯಕ್ಷರಾದ ಬೆಟ್ಟಿನ್‌ ವಿಜಯ್‌ ಕುಮಾರ್‌ ಸದಾಶಿವ ಆಚಾರ್ಯ ಶ್ರೀ ಕ್ಷೇತ್ರ ಧರ್ಮಸ್ಥಳ ಸಹಕಾರಿ ಸಂಘದ ಸಂಯೊಜಕರಾದ ಶಾಂತ ಹಾಗೂ ಮಾಜಿ ಅದ್ಯಕ್ಷರಾದ ಕೆ ವಿ ಅಣ್ಣಪ್ಪ ಗಣೇಶ ಪೂಜಾರಿ ಮತ್ತು ಡಿ ಕೆ ಚಂದ್ರ ಶೇಖರ ಪರಾಶಕ್ತಿ ಸ್ಟೋರ್ ಮಾಲಕರಾದ ಚಂದ್ರ ಶಂಕರ್ ಕಂಚುಗಾರ ಮಂಜು ಪೂಜಾರಿ ಕೆಳಮನೆ ಹಾಗೂ ಆಡಳಿತ ಮಂಡಳಿಯ ಸದಸ್ಯರು ದಶಮಾನೋತ್ಸವ ಸಮಿತಿಯ ಸದಸ್ಯರು  ಉಪಸ್ಥಿತರಿದ್ದರು

ಚಂದ್ರ ಪೂಜಾರಿ ನಿರೂಪಿಸಿದ ರಮೇಶ್‌ ಪೂಜಾರಿ ಮೇಲ್‌ ಹಿತ್ಲು ಸ್ವಾಗತಿಸಿ ಶಂಕರ್‌ ಕೆ ಪ್ರಾರ್ಥಿಸಿ ಪ್ರಶಾಂತ ಮೊಗವೀರ ಧನ್ಯವಾದವಿತ್ತರು

 

Related Articles

error: Content is protected !!