ಕುಂದಾಪುರ :ಕೊಲ್ಲೂರಿನ ಶ್ರೀ ಮೂಕಾಂಬಿಕಾ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವದ ನಿಮಿತ್ತ 3 ನೇ ದಿನವಾದ ಮಂಗಳವಾರ ಬೆಳಿಗ್ಗೆ ಪ್ರತಿಷ್ಠಾ ಹೋಮ ಆಧಿವಾಸ ಹೋಮಗಳು ನಡೆಯಿತು ಧ್ವಜಾರೋಹಣ ಮಾಡಲು ಸಿಂಹಯಾಗ ನಡೆದು ಸಿಂಹಯಾಗದ ಹುತ ಭಸ್ಮವನ್ನು ಹಚ್ಚಿ ಅದಕ್ಕೆ ಧಾರ್ಮಿಕ ಕೈಂಕರ್ಯಯಗಳ ಮೂಲಕ ಪೂಜೆಯನ್ನು ಸಲ್ಲಿಸಿ ಧ್ವಜಾರೋಹಣವನ್ನು ಮಾಡಲಾಯಿತು
ಧ್ವಜಸ್ತಂಭಕ್ಕೆ ಪರಿಸರದ ಭೂಮಿಯಲ್ಲಿ ಬೆಳೆದ ಹಣ್ಣು ಹಂಪಲುಗಳನ್ನು ಕಟ್ಟಿ ಸೊಪ್ಪಿನಿಂದ ಮುಚ್ಚಿ ಬಟ್ಟೆಯಿಂದ ಕಟ್ಟಲಾಯಿತು ಧ್ವಜಸ್ತಂಭದ ಅಷ್ಟ ದಿಕ್ಕುಗಳಿಗೂ ಅಭಿಷೇಕ ಮಾಡಿ ಎಂಟು ದಿಕ್ಕಿಗೂ ಬಲಿ ಸಮರ್ಪಣೆ ಮಾಡಲಾಯಿತು