Home » ಕೊಲ್ಲೂರಿಗೆ ಕೇರಳ ರಾಜ್ಯಪಾಲರ ಭೇಟಿ
 

ಕೊಲ್ಲೂರಿಗೆ ಕೇರಳ ರಾಜ್ಯಪಾಲರ ಭೇಟಿ

by Kundapur Xpress
Spread the love

ಕುಂದಾಪುರ : ಕೇರಳದ ರಾಜ್ಯಪಾಲ ಆರೀಫ್ ಮೊಹಮ್ಮದ್ ಖಾನ್ ಅವರು ಕೊಲ್ಲೂರು ಶ್ರೀ ಮೂಕಾಂಬಿಕಾ ದೇಗುಲಕ್ಕೆ ಆಗಮಿಸಿ, ದೇವಿಯ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು. ದೇಗುಲದ ಅರ್ಚಕರಾದ ಡಾ। ಕೆ.ಎನ್. ನರಸಿಂಹ ಅಡಿಗ, ಸುಬ್ರಹ್ಮಣ್ಯ ಅಡಿಗ ಅವರ ನೇತೃತ್ವದಲ್ಲಿ ಧಾರ್ಮಿಕ ಕಾರ್ಯಗಳು ನಡೆದವು. ಕುಂದಾಪುರ ಉಪಕಮಿಷನರ್ ಮಹೇಶ್ಚಂದ್ರ, ದೇಗುಲದ ಕಾರ್ಯನಿರ್ವಹಣಾಧಿಕಾರಿ ಪ್ರಶಾಂತಕುಮಾ‌ರ್ ಶೆಟ್ಟಿ ಬೈಂದೂರು ತಹಶೀಲ್ದಾರ್ ಪ್ರದೀಪ್, ಡಿವೈಎಸ್‌ಪಿ ಬೆಳ್ಳಿಯಪ್ಪ ಅರ್ಚಕರು, ಸಿಬಂದಿ ಉಪಸ್ಥಿತರಿದ್ದು, ರಾಜ್ಯಪಾಲರನ್ನುಸ್ವಾಗತಿಸಿದರು. ದೇಗುಲದ ವತಿಯಿಂದ ರಾಜ್ಯಪಾಲರನ್ನು ಸಮ್ಮಾನಿಸಲಾಯಿತು. 

 

Related Articles

error: Content is protected !!