190
ಉಡುಪಿ : ಪರ್ಯಾಯ ಪೀಠಾಧಿಪತಿಗಳಾದ ಪರಮ ಪೂಜ್ಯ ಶ್ರೀ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ತಮ್ಮ ಚತುರ್ಥ ಪರ್ಯಾಯದಲ್ಲಿ ಲೋಕ ಕಲ್ಯಾಣಾರ್ಥವಾಗಿ ಸಂಕಲ್ಪಿಸಿದ ಕೋಟಿ ಗೀತಾ ಲೇಖನ ಯಜ್ಞ ದ ದೀಕ್ಷೆಯನ್ನು ದೇಶ ವಿದೇಶಗಳನ್ನಿನ ಭಕ್ತರು ಈಗಾಗಲೆ ಪಡೆದಿದ್ದು, ಅನೇಕರು ಉತ್ಸಾಹದಿಂದ ಲೇಖನವನ್ನು ಸಂಪೂರ್ಣಗೊಳಿಸಿದ್ದಾರೆ.
ಇಂದು ಶ್ರೀಮಠದ ಭಕ್ತರೂ, ಅಮೇರಿಕಾ ನಾರ್ತ್ ಕೆರೋಲಿನಾದ (ರಾಲೇ)ಕ್ಯಾರಿ ನಗರವಾಸಿಗಳಾದ ಶ್ರೀಮತಿ ಸವಿತಾ ಹಾಗು ಶ್ರೀ ರವಿರಾಜ ಉಪಾಧ್ಯಾಯ ಮತ್ತು ತಂಡದವರು ಉಡುಪಿ ಕೃಷ್ಣ ಮಠಕ್ಕೆ ಭೇಟಿ ನೀಡಿ ತಾವು ಬರೆದಿರುವ ಪುಸ್ತಕವನ್ನು ಶ್ರೀಗಳ ಮೂಲಕ ಕೃಷ್ಣನಿಗೆ ಸಮರ್ಪಿಸಿ, ಶ್ರೀಪಾದರಿಂದ ಫಲಮಂತ್ರಾಕ್ಷತೆಯನ್ನು ಸ್ವೀಕರಿಸಿದರು.
ಪೂಜ್ಯ ಶ್ರೀಪಾದರು ಭಕ್ತರು ಬರೆದಿರುವ ಗೀತಾ ಪುಸ್ತಕ ಸಮರ್ಪಣೆಯನ್ನು ಪ್ರಾರಂಭಿಸಿದ್ದು, ಈಗಾಗಲೇ ಬರೆದು ಮುಗಿಸಿದವರು ಪರ್ಯಾಯ ಅವಧಿಯಲ್ಲಿ ಉಡುಪಿಗೆ ಭೇಟಿ ನೀಡಿ ಶ್ರೀಪಾದರ ಮೂಲಕ ಕೃಷ್ಣನಿಗೆ ಅರ್ಪಿಸಿ ಪ್ರಸಾದವನ್ನು ಸ್ವೀಕರಿಸಬೇಕಾಗಿ ಕಾರ್ಯದರ್ಶಿಗಳು ವಿನಂತಿಸಿದ್ದಾರೆ

