Home » ಕುಂಭಮೇಳದಲ್ಲಿ ಪುಣ್ಯಸ್ನಾನಗೈದ ಸ್ನೇಹಿತರು
 

ಕುಂಭಮೇಳದಲ್ಲಿ ಪುಣ್ಯಸ್ನಾನಗೈದ ಸ್ನೇಹಿತರು

by Kundapur Xpress
Spread the love

ಕುಂದಾಪುರ : ಕುಂದಾಪುರದಿಂದ ಸುಮಾರು 2000 ಕಿಲೋಮೀಟರ್‌ ದೂರದ ಉತ್ತರಪ್ರದೇಶದ ಪ್ರಯಾಗ್‌ರಾಜ್ ನಲ್ಲಿ 144 ವರ್ಷಕ್ಕೊಮ್ಮೆ ನಡೆಯುತ್ತಿರುವ ಮಹಾ ಕುಂಭಮೇಳಕ್ಕೆ ನಗರದ ಚಿಕ್ಕನಸಾಲು ರಸ್ತೆಯ ಮೂವರು ತಮ್ಮ ಕಾರಿನಲ್ಲಿ ತೆರಳಿ ಸಂಗಮದಲ್ಲಿ ಪುಣ್ಯಸ್ನಾನಗೈದಿದ್ದಾರೆ

ನಗರದ ಚಿಕ್ಕನಸಾಲು ರಸ್ತೆಯ ಮೂವರು ಸ್ನೇಹಿತರಾದ ಕೆ ಪ್ರವೀಣ್‌ ಕುಮಾರ್‌ ಕೆ ಜಿ ಸಚ್ಚಿದಾನಂದ ಹಾಗೂ ಕೆ ಪಿ ಸುಧೀರ್‌ ಎಂಬವರು ಪ್ರಯಾಗರಾಜ್‌ ತಲುಪಿ ಕುಂಭಮೇಳದ ಸಂಗಮದಲ್ಲಿ ಪುಣ್ಯಸ್ನಾನ ಮಾಡಿ ನಗರಕ್ಕೆ ವಾಪಾಸ್ಸಾಗಿದ್ದಾರೆ

ಕುಂಭಮೇಳದಲ್ಲಿ ಭಾಗವಹಿಸಿದ್ದು ನನ್ನ ಜೀವನದ ಪುಣ್ಯ ಅಲ್ಲಿಗೆ ಆಗಮಿಸುತ್ತಿರುವ ಕೋಟಿ ಕೋಟಿ ಭಕ್ತರಿಗಾಗಿ ಉತ್ತರಪ್ರದೇಶ ಸರಕಾರದ ಅತ್ಯುತ್ತಮ ಆಯೋಜನೆ ಮತ್ತು ಸೂಕ್ಷ್ಮ ನಿರ್ವಹಣೆಯ ವ್ಯವಸ್ಥೆಯನ್ನು ಕಂಡು ಪುಳಕಿತನಾಗಿದ್ದು ಅದಕ್ಕಾಗಿ ಉತ್ತರಪ್ರದೇಶದ ಯೋಗಿ ಸರ್ಕಾರವನ್ನು ಅಭಿನಂದಿಸಬೇಕು ಎಂದಿದ್ದಾರೆ ಕೆ.ಪ್ರವೀಣ್‌ ಕುಮಾರ್

ವಿಶಿಷ್ಠ ರೀತಿಯ ನಾಗಸಾಧುಗಳು, ತಪಸ್ಸನ್ನೇ ಜೀವನದ ಉಸಿರಾಗಿರಿಸಿಕೊಂಡು ಸಾಧನೆಗೈಯುತ್ತಿರುವ ಸಾಧು ಸನ್ಯಾಸಿಗಳು ಹಿಮಾಲಯದಿಂದ ಆಗಮಿಸಿದ ಸಾಧು ಸಂತರು ಕಳೆದ 12 ವರ್ಷಗಳಿಂದ ಒಂದೇ ಕಾಲಿನಲ್ಲಿ ನಿಂತ ಸಾಧು,ಹಲವಾರು ವರ್ಷಗಳಿಂದ ತನ್ನ ಕೈಯನ್ನು ಕೆಳಗೆ ಇಳಿಸದೇ ಮೇಲಕ್ಕೆ ಏತ್ತಿಕೊಂಡಿರುವ ತಪಸ್ವಿ ಹಾಗೂ ಬಾಲಕ ಸ್ವಾಮೀಜಿಯ ಆಶೀರ್ವಾದ ಪಡೆಯುತ್ತಿರುವ ಭಕ್ತ ಸಮೂಹ ಕಂಡು ನಿಬ್ಬೆರಗಾಗಿದ್ದು ಕುಂಭಮೇಳದಲ್ಲಿ ಪಾಲ್ಗೊಂಡಿದ್ದರಿಂದ ನನ್ನ ಜೀವನವೇ ಪಾವನ ಎಂದು  ಕೆ ಜಿ ಸಚ್ಚಿದಾನಂದ ಹೇಳಿದರು

ಇನ್ನೋರ್ವ ಯಾತ್ರಿ ಕೆ ಪಿ ಸುಧೀರ್‌, ಕುಂಭಮೇಳದಲ್ಲಿನ ಸ್ವಚ್ಚತೆ ಹಾಗೂ ಅಲ್ಲಿಯ ಪೊಲೀಸರ ನಡವಳಿಕೆಯಿಂದ ಸಂತೋಷಗೊಂಡಿದ್ದು ಕುಂಭಮೇಳ ಪ್ರದೇಶದ ಸ್ವಚ್ಚತೆ ಹೆಮ್ಮೆಯ ವಿಷಯವಾಗಿದ್ದು ಶೌಚಾಲಯಗಳನ್ನು ನಿಯಮಿತವಾಗಿ ಸ್ವಚ್ಚಗೊಳಿಸಲಾಗತಿತ್ತು ಮತ್ತು ಸುತ್ತಲೂ ಇರುವ ಸ್ಥಳವನ್ನು ಆಗಾಗ ಗುಡಿಸಿ ಸ್ವಚ್ಚತೆಯನ್ನು ಕಾಪಾಡಿಕೊಳ್ಳುತ್ತಿದ್ದರು ಪೊಲೀಸ್‌ ರಕ್ಷಣೆಯ ಕಾರ್ಯವಂತೂ ಶ್ಲಾಘನೀಯವಾಗಿದ್ದು ಅವರು ಸದಾ ನಗುಮುಖದೊಂದಿಗೆ ಆಗಮಿಸಿದ ಭಕ್ತರಿಗೆ ಮಾರ್ಗದರ್ಶನ ಮಾಡುತ್ತಿದ್ದರು ಪೊಲೀಸರು ಸಾರ್ವಜನಿಕರೊಂದಿಗೆ ಅತ್ಯಂತ ತಾಳ್ಮೆಯಿಂದ ಆತ್ಮೀಯತೆಯಿಂದ  ಗೌರವಪೂರ್ವಕವಾಗಿ ಭಕ್ತರಿಗೆ ನೆರವಾಗುತ್ತಿದ್ದರು ಎಂದ ಕೆ ಪಿ ಸುಧೀರ್ ಮಿಲಿಟರಿ ಪಡೆಯಿಂದ ಟ್ಯಾಂಕ್‌ನ್ನು ಉಪಯೋಗಿಸಿ ನಿರ್ಮಿಸಿದ ಸೇತುವೆ ಅತ್ಯಭ್ದುತವೆಂದು ವರ್ಣಿಸಿದ್ದಾರೆ 

ಉತ್ತರ ಪ್ರದೇಶದಿಂದ ನಾಗಪುರ ಮಾರ್ಗವಾಗಿ ಸೋಲಾಪುರದ ಹೆದ್ದಾರಿಯು ರಾಜಮಾರ್ಗವಾಗಿದ್ದು ಯಾವುದೇ ಅಡೆತಡೆಯಿಲ್ಲದೇ 150 ಕೀ ಮೀಟರ್‌ ವೇಗದಲ್ಲಿ ಕಾರು ಚಲಿಸುತಿತ್ತು ಎಂದ ಪ್ರವೀಣ್‌ ಕುಮಾರ್‌ ಕುಂಭಮೇಳದಲ್ಲಿ ಪಾಲ್ಗೊಂಡಿದ್ದು ಬದುಕು ಸಾರ್ಥಕವಾಯಿತು ಎಂದು ತಿಳಿಸಿದ್ದಾರೆ

 

Related Articles

error: Content is protected !!