Home » ಕುಂದೇಶ್ವರದಲ್ಲಿ ಸಡಗರದ ಶಿವರಾತ್ರಿ ಸಂಭ್ರಮ
 

ಕುಂದೇಶ್ವರದಲ್ಲಿ ಸಡಗರದ ಶಿವರಾತ್ರಿ ಸಂಭ್ರಮ

by Kundapur Xpress
Spread the love

ಕುಂದಾಪುರ : ನಗರದ ಇತಿಹಾಸ ಪ್ರಸಿದ್ಧ ಶ್ರೀ ಕುಂದೇಶ್ವರ ದೇವಸ್ಥಾನದಲ್ಲಿ ಮಹಾಶಿವರಾತ್ರಿಯನ್ನು ಅತ್ಯಂತ ಸಡಗರ ಸಂಭ್ರಮದಿಂದ ಆಚರಿಸಲಾಯಿತು ಶುಕ್ರವಾರ ಬೆಳಗ್ಗೆಯಿಂದಲೇ ಸಹಸ್ರಾರು ಭಕ್ತರು ಸರದಿ ಸಾಲಲ್ಲಿ ನಿಂತು ಶ್ರೀ ಕುಂದೇಶ್ವರನ ದರ್ಶನ ಪಡೆದು ಪುನೀತರಾದರು  ಭಕ್ತರು ವಿಶೇಷ ಪೂಜೆ, ಅಭಿಷೇಕ, ಪಂಚಾಮೃತ ಅಭಿಷೇಕ, ಬಿಲ್ವಪತ್ರೆ ಆರ್ಚನೆ, ಮಂಗಳಾರತಿ, ರುದ್ರಾಭಿಷೇಕದ ಮೂಲಕ ಭಕ್ತಿ ಸಮರ್ಪಿಸಿ ಕೃತಾರ್ಥರಾದರು

ಶ್ರೀ ಕುಂದೇಶ್ವರ ದೇವಸ್ಥಾನದ ದೇವರ ಸನ್ನಿಧಿಯಲ್ಲಿ ಶತರುದ್ರಾಭಿಷೇಕ ಮಹಾಪೂಜೆ ಸಂಜೆ ರಂಗಪೂಜೆ ಇನ್ನಿತರ ಧಾರ್ಮಿಕ ಕಾರ್ಯಕ್ರಮಗಳು ನೆರವೇರಿತು ಈ ಭಾರಿ ಭಕ್ತರ ಗಡಣವೇ ದೇವಸ್ಥಾನಕ್ಕೆ ಆಗಮಿಸಿದ್ದು ಸುಮಾರು 30.000 ಕ್ಕೂ ಮಿಕ್ಕಿ ಭಕ್ತರು ದೇವರ ದರ್ಶನದೊಂದಿಗೆ ವಿವಿಧ ರೀತಿಯ ಪ್ರಸಾದವನ್ನು ಸ್ವೀಕರಿಸಿದರು

ಪ್ರಸಾದ ವಿತರಣೆ ಹಾಗೂ ದೇವರ ದರ್ಶನಕ್ಕೆ ಆಗಮಿಸಿದ ಭಕಾದಿಗಳಿಗೆ ಎಲ್ಲೂ ತೊಂದರೆಯುಂಟಾಗದಂತೆ ದೇವಾಲಯದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರಾದ ಎಸ್ ಕೃಷ್ಣಾನಂದ ಚಾತ್ರ ಹಾಗೂ ಸದಸ್ಯರಾದ ಸತೀಶ್ ಶೆಟ್ಟಿಯವರು ಸಲಹೆ ಸೂಚನೆಗಳನ್ನು ನೀಡಿದರು

ಮುಂಜಾನೆ ಸೂರ್ಯೋದಯದಿಂದ ಪ್ರಾರಂಭವಾದ ಅಖಂಡ ಭಜನೆ ಸಂಜೆ ಸೂರ್ಯಾಸ್ತಮಾನದವರೆಗೆ ನಡೆಯಿತು ರಾತ್ರಿ ಗಂಟೆ 7.00 ರಿಂದ ನೃತ್ಯವಿಧುಷಿ ಪವಿತ್ರ ಅಶೋಕ್ ಅವರ ನಿರ್ದೇಶನದಲ್ಲಿ ನೃತ್ಯ ವಸಂತ ನಾಟ್ಯಾಲಯದ ಕಲಾವಿದೆಯರಿಂದ ನೃತ್ಯ ಸಿಂಚನ ಭರತನಾಟ್ಯ ಪ್ರದರ್ಶನಗೊಂಡಿತು

   

Related Articles

error: Content is protected !!