Home » ಕುಂದೇಶ್ವರದಲ್ಲಿ ಶಿವರಾತ್ರಿ ಉತ್ಸವ ಸಂಪನ್ನ
 

ಕುಂದೇಶ್ವರದಲ್ಲಿ ಶಿವರಾತ್ರಿ ಉತ್ಸವ ಸಂಪನ್ನ

by Kundapur Xpress
Spread the love

ಕುಂದಾಪುರ : ನಗರದ ಇತಿಹಾಸ ಪ್ರಸಿದ್ದ ಶ್ರೀ ಕುಂದೇಶ್ವರ ದೇಗುಲದಲ್ಲಿ  ಮಹಾ ಶಿವರಾತ್ರಿ ಮಹೋತ್ಸವವು  ವಿವಿಧ ಧಾರ್ಮಿಕ ಹಾಗೂ ಸಾಂಸ್ಕ್ರತಿಕ ಕಾರ್ಯಕ್ರಮಗಳೊಂದಿಗೆ ಸಂಪನ್ನಗೊಂಡಿತು

ಬೆಳಿಗ್ಗೆ 5.00 ಗಂಟೆಯಿಂದಲೇ  ಭಕ್ತರು ಶ್ರೀ ಕುಂದೇಶ್ವರನ ದರ್ಶನಕ್ಕೆ ಆಗಮಿಸಿ ವಿಶೇಷ ಪೂಜೆ ಸಲ್ಲಿಸಿದರು ಬೆಳಿಗ್ಗೆ 9.00 ರಿಂದ ಶ್ರೀ ಕುಂದೇಶ್ವರ ದೇವರ ಸನ್ನಿಧಿಯಲ್ಲಿ ನಡೆದ ಶತರುದ್ರಾಭಿಷೇಕ, ಮಹಾಪೂಜೆಯಲ್ಲಿ ಸಹಸ್ರಾರು ಭಕ್ತರು ಭಾಗವಹಿಸಿ  ಪ್ರಸಾದ ಸ್ವೀಕರಿಸಿದರು

ಬೆಳಿಗ್ಗೆ ದೇವಸ್ಥಾನದ ವತಿಯಿಂದ ನಿರಂತರ ಪ್ರಸಾದ ವಿತರಣೆ ಹಾಗೂ ಬೆಳಿಗ್ಗೆ ಸೂರ್ಯೋದಯದಿಂದ ಸೂರ್ಯಾಸ್ತಮಾನದ ತನಕ ಕುಂದಾಪುರ ತಾಲೂಕು ಭಜನಾ ಮಂಡಳಿಗಳ ಒಕ್ಕೂಟ (ರಿ) ಇವರಿಂದ ಅಖಂಡ ಭಜನಾ ಕಾರ್ಯಕ್ರಮ ಜರುಗಿತು

ಸಂಜೆ ಗಂಟೆ 5.30ರಿಂದ 7.30ರವರೆಗೆ ಶ್ರೀ ವೆಂಕಟೇಶ ವೈದ್ಯರ ನೇತೃತ್ವದಲ್ಲಿ ಯಶಸ್ವಿ ಕಲಾವೃಂದ ಕೊಮೆ, ತೆಕ್ಕಟ್ಟೆ ಮಕ್ಕಳ ಮೇಳದವರಿಂದ ಯಕ್ಷಗಾನ “ಕೃಷ್ಣಾರ್ಜುನ ಕಾಳಗ” ಪ್ರದರ್ಶನಗೊಂಡು ರಾತ್ರಿ ಗಂಟೆ 7.30ರಿಂದ 9.30ರವರೆಗೆ ನೃತ್ಯವಿದುಷಿ ಪ್ರವಿತಾ ಅಶೋಕ ಅವರ ನಿರ್ದೇಶನದಲ್ಲಿ ನೃತ್ಯವಸಂತ ನಾಟ್ಯಾಲಯದ ಕಲಾವಿದೆಯರಿಂದ ನೃತ್ಯ ಸಿಂಚನ ಎಂಬ ಸಾಂಸ್ಕ್ರತಿಕ ಕಾರ್ಯಕ್ರಮ ಜರುಗಿತು

ರಾತ್ರಿ ಗಂಟೆ 9.30ರಿಂದ ಶ್ರೀ ಕುಂದೇಶ್ವರ ಸ್ವಾಮಿಯ ಸನ್ನಿಧಿಯಲ್ಲಿ ರಂಗಪೂಜೆ , ಮಹಾಮಂಗಳಾರತಿ , ಪ್ರಸಾದ ವಿತರಣೆ ನಡೆಯಿತು

ಈ ಸಂದರ್ಭದಲ್ಲಿ ದೇಗುಲದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರಾದ ವಾಸದೇವ ಯಡಿಯಾಳ್‌ ಹಾಗೂ ಸಮಿತಿ ಸದಸ್ಯರುಗಳಾದ  ಸತೀಶ್‌ ಗಾಣಿಗ ನಾಗರಾಜ್‌ ನಾಯ್ಕ್‌ ಜಿ ಎಸ್‌ ಭಟ್‌ ವಿಠಲ್‌ ಕಾಂಚನ್ ದಿನೇಶ್‌ ಶ್ರೀಮತಿ ಗಿರಿಜಾ ಉದಯ್‌ ಹವಲ್ದಾರ್‌ ಶ್ರೀಮತಿ ಸೀಮಾ ಚಂದ್ರ ಪೂಜಾರಿ ಹಾಗೂ ಅರ್ಚಕ ವೃಂದದವರು ಉಪಸ್ಥಿತರಿದ್ದರು

 

Related Articles

error: Content is protected !!