166
ಕುಂದಾಪುರ : ನಗರದ ಮುಖ್ಯ ರಸ್ತೆಯಲ್ಲಿರುವ ಶ್ರೀಲಕ್ಷ್ಮೀನಾರಾಯಣ ದೇವಸ್ಥಾನದಲ್ಲಿ ಕಾರ್ತಿಕ ದೀಪೋತ್ಸವವು ಸಡಗರ ಸಂಭ್ರಮದಿಂದ ಜರುಗಿತು
ಶ್ರೀದೇವರಿಗೆ ವಿಶೇಷ ಅಲಂಕಾರ, ನಾನಾ ಧಾರ್ಮಿಕ ವಿಧಿ ವಿದಾನಗಳು ನಡೆಯಿತು ಭಕ್ತರು ತುಪ್ಪದ ಹಣತೆ ದೀಪ ಬೆಳಗಿಸಿದರು
ಭಜಕರು ರಚಿಸಿದ ರಂಗೋಲಿ ಅದರ ಮೇಲೆ ದೀಪ ಬೆಳಗಿಸಿದ ಹಿನ್ನೆಲೆಯಲ್ಲಿ ದೇಗುಲವು ಹಣತೆಗಳ ದೀಪಾಲಂಕಾರದಿಂದ ಝಗಮಗಿಸಿತು
ಸಂಜೆ ದೀಪ ಪ್ರಜ್ವಲನೆ, ರಾತ್ರಿ ಮಹಾ ಮಂಗಳಾರತಿ ನಡೆಯಿತು. ದೇವಳದ ಆಡಳಿತ ಮೊಕ್ತಸರ ಗೋಕುಲ ಶೇಟ್ ನೇತೃತ್ವದಲ್ಲಿ ಧಾರ್ಮಿಕ ವಿಧಿವಿಧಾನಗಳು ನಡೆದವು.

