Home » ಶಾರದೆಯ ಅನುಗ್ರಹ ಪಡೆದ ಸ್ತ್ರೀ-ಶಕ್ತಿ
 

ಶಾರದೆಯ ಅನುಗ್ರಹ ಪಡೆದ ಸ್ತ್ರೀ-ಶಕ್ತಿ

ರಾಮಕ್ಷತ್ರಿಯ ಮಹಿಳಾ ಮಂಡಳಿ,ಕುಂದಾಪುರ

by Kundapur Xpress
Spread the love
ಸರ್ವ ಮಂಗಲ ಮಾಂಗಲ್ಯೇ
ಶಿವೇ ಸರ್ವಾರ್ಥ ಸಾಧಿಕೇ
ಶರಣ್ಯೇ ತ್ರ್ಯಂಬಿಕೇ ದೇವಿ
ನಾರಾಯಣಿ ನಮೋಸ್ತುತೆ

ನವರಾತ್ರಿಯ ಈ ಶುಭ ಸಂದರ್ಭದಲ್ಲಿ ನಮ್ಮಲ್ಲಿ ಶಕ್ತಿ ಸಮೃದ್ಧಿ ಚೈತನ್ಯ ಹಾಗೂ ಜ್ಞಾನವನ್ನು ತುಂಬಿಸುವ ಶಕ್ತಿ ದೇವತೆಯಾದ ಕಾಳಿಕಾದೇವಿ ಲಕ್ಷ್ಮೀದೇವಿ ಹಾಗೂ ಸರಸ್ವತಿ ದೇವಿಯನ್ನು ನಾವು ಆರಾಧಿಸುವುದು ಶಾಸ್ತ್ರ ಸಮ್ಮತವಾಗಿದೆ

ಕಾಳಿಕಾದೇವಿಯು ನಮ್ಮೊಳಗಿನ ಕಾಮನೆಗಳೆಂಬ ಶತ್ರುವನ್ನು ಸಂಹರಿಸುವವಳಾದರೇ ಲಕ್ಷ್ಮಿದೇವಿಯು ನಮ್ಮ ಮನೆ-ಮನಗಳಲ್ಲಿ ಸಮೃದ್ಧಿಯನ್ನು ಉಂಟುಮಾಡುತ್ತಾಳೆ ಸರಸ್ವತಿ ದೇವಿಯು ನಮಗೆ ಅತೀ ಅಗತ್ಯವಾದ ಜ್ಞಾನ ಚಕ್ಷುವನ್ನು ನೀಡುತ್ತಾಳೆ ಆಕೆ ವಿದ್ಯಾದಾಯಿನಿಯೂ ಹೌದು ಜ್ಞಾನದ ಶಕ್ತಿ ಇಲ್ಲದಿದ್ದರೆ ನಾವು ಅಂಧಕಾರದಲ್ಲಿ ಕೊಳೆಯಬೇಕಾಗುತ್ತದೆ ನಮ್ಮ ಬದುಕು ಸುಂದರವು ಸಂತಸದಾಯಕವೂ ಆಗಿರಬೇಕಾದರೆ ನಾವು ಜ್ಞಾನವೇತ್ತರರಾಗಬೇಕು

ನಿಜವಾದ ಜ್ಞಾನವೆಂದರೆ ಆಧ್ಯಾತ್ಮಿಕ ಜ್ಞಾನ ಆ ಜ್ಞಾನವನ್ನು ನಮಗೆ ಕರುಣಿಸುವವಳು ಶಾರದೆ ಆಕೆ ಶಕ್ತಿ ದೇವತೆ ಆದುದರಿಂದಲೇ ನವರಾತ್ರಿ 9 ದಿನಗಳಲ್ಲಿ ಶ್ರೀದೇವಿಯನ್ನು9 ರೂಪಗಳಲ್ಲಿ ಆರಾಧಿಸುತ್ತಾ ನಮ್ಮಲ್ಲಿನ ತಾಮಸಿಕ ರಾಜಸಿಕ ಗುಣಗಳನ್ನು ನಿವಾರಿಸಿ ಸಾತ್ವಿಕತೆಯನ್ನು ಮೈದುಂಬಿಸುವ ಮೂಲಕ ಆಧ್ಯಾತ್ಮಿಕ ಉನ್ನತಿಯನ್ನು ಸಾಧಿಸಲು ಪ್ರಯತ್ನಿಸುತ್ತೇವೆ ಹಾಗೆಯೇ ಆ ಮೂಲಕ ಬದುಕನ್ನು ಶಾಂತ ಸುಂದರ ಹಾಗೂ ತಪ್ತಿಕರವಾಗಿ ರೂಪಿಸಿಕೊಳ್ಳಲು ಮುಂದಾಗುತ್ತೇವೆ 

ಶಕ್ತಿ ದೇವತೆಯಿಂದ ವಿಶೇಷವಾಗಿ ಅನುಗ್ರಹಿತರಾಗಿರುವವಳು ಮಹಿಳೆ ಅರ್ಥ ಮಹಿಮೆಯಿಂದ ಕೂಡಿದವಳು, ಗೌರವ ಶಾಲಿನಿ ಸದ್ಭಾವನೆ ತುಂಬಿದ ಮಹಿಳೆ ಮನೆ ಸಮಾಜ ಸಂಘಟನೆಗಳಲ್ಲಿ ಶಕ್ತಿ ತುಂಬುವ ಸ್ಪೂರ್ತಿದಾತೆಯಾಗಿದ್ದಾಳೆ ನುಡಿದಂತೆ ನಡೆಯಬಲ್ಲ ಹಾಗೆಯೇ ಸಾಧಿಸಿ ತೋರಬಲ್ಲ ಸ್ಥಿರವಾದ ದೃಢವಾದ ಮನೋಭಾವನೆ ಮಹಿಳೆಯರಲ್ಲಿದೆ ಅವಳಲ್ಲಿ ಇರುವ ಶಕ್ತಿ ಪ್ರತಿಭೆ ಸಮಾಜ ಸೇವೆಗೆ ಮೀಸಲಾಗಿರಿಸಬೇಕೆಂಬ ಉದ್ದೇಶದಿಂದ ರಾಮಕ್ಷತ್ರಿಯ ಮಹಿಳಾ ಮಂಡಳಿಯು 1979ರಲ್ಲಿ ಜನ್ಮ ತಾಳಿತು

ಶ್ರೀಮತಿ ವತ್ಸಲಾ ಗೋಪಾಲ್‌ ರಾವ್‌

ಸ್ಥಾಪಕ ಅಧ್ಯಕ್ಷರು

1979 ಇದು ರಾಮಕ್ಷತ್ರಿಯ ಸಮಾಜದ ಮಹಿಳೆಯರಲ್ಲಿ ಹೊಸ ಚೈತನ್ಯ ಉತ್ಸಾಹ ತಂದಂತಹ ವರ್ಷ ಸಮಾಜದ ಮಹಿಳೆಯರಲ್ಲಿ  ದೈವಿ ಭಕ್ತಿಯನ್ನು ಜಾಗೃತಗೊಳಿಸಿ ಧಾರ್ಮಿಕ ಜೀವನದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವಂತೆ ಮಾಡಬೇಕೆಂಬ ಹೊಂಗನಸಿನಿಂದ ರಾಮಕ್ಷತ್ರಿಯ ಮಹಿಳಾ ಮಂಡಳಿಯ ಸ್ಥಾಪನೆ ಆಯಿತು

ಸರೋಜ ಅರುಣ್‌ ಕುಮಾರ್‌ ಎಸ್‌ ವಿ

ಅಧ್ಯಕ್ಷರು

ಅಂದು ಶ್ರೀಮತಿ ವತ್ಸಲ ಗೋಪಾಲ್ ರಾವ್ ರವರು ಪ್ರಥಮ ಅಧ್ಯಕ್ಷೆಯಾಗಿ ಮತ್ತು ಕಾರ್ಯದರ್ಶಿಯಾಗಿ ಸುಗುಣ ಕೆ ಆರ್ ಸರ್ವಾನುಮತದಿಂದ ಆಯ್ಕೆಯಾದರು ನವರಾತ್ರಿಯಲ್ಲಿ ಒಂದು ದಿನ ಶ್ರೀ ಶಾರದಾ ದೇವಿಯ ಫೋಟೋ ಇರಿಸಿ ಪೂಜೆ ಮಾಡುವ ಪರಿಪಾಠವನ್ನು ಅಂದಿನ ರಾಮಕ್ಷತ್ರಿಯ ಮಂಡಳಿಯ ಹಿರಿಯರು ಇರಿಸಿಕೊಂಡರು ಅದರಂತೆ ಆರು ವರ್ಷ ನಡೆಸಿಕೊಂಡು ಬಂದರು

ಶ್ರೀಮತಿ ಬಿಂದಿಯಾ ಅಶೋಕ್‌ ಬೆಟ್ಟಿನ್‌ 

ಕಾರ್ಯದರ್ಶಿ

1985 ರಲ್ಲಿ ರಾಮಕ್ಷತ್ರಿಯ ಮಹಿಳಾ ಮಂಡಳಿ ಅಧ್ಯಕ್ಷರಾಗಿ ಆಯ್ಕೆಯಾದ ಶ್ರೀಮತಿ ಸರೋಜಾ ಗೋವಿಂದ ಪಟ್ವಾಲ್ ಇವರು ಮಂಡಳಿಯ ಕಾರ್ಯ ಚಟುವಟಿಕೆಯನ್ನು ವಿಸ್ತರಿಸುವ ಉದ್ದೇಶದಿಂದ 4 ದಿನದ ಮೂರ್ತಿ ಪೂಜೆಯನ್ನು ಮಾಡುವ ಉತ್ಸಾಹವನ್ನು ತೋರಿದರು ಇದಕ್ಕೆ ಅಂದಿನ ಮಂಡಳಿಯ ಸದಸ್ಯರ ಪೂರ್ಣ ಸಹಕಾರ ಕೊಡ ದೊರಕಿತು

ಶ್ರೀಮತಿ ದೇವಕಿ ಸಣ್ಣಯ್ಯ

ಕೋಶಾಧಿಕಾರಿ

ಅದರಂತೆ ನವರಾತ್ರಿಯ ಮೂಲ ನಕ್ಷತ್ರದಂದು ಶ್ರೀದೇವಿಯ ಮೂರ್ತಿಯನ್ನು ವಾದ್ಯ ಮೇಳಗಳೊಂದಿಗೆ ಮೆರವಣಿಗೆಯ ಮೂಲಕ ತಂದು ಸೀತಾರಾಮಚಂದ್ರ ದೇವಸ್ಥಾನದಲ್ಲಿ ಪ್ರತಿಷ್ಠಾಪಿಸಿ ದುರ್ಗಾ ಹೋಮ ಸಪ್ತಶತಿ ಪಾರಾಯಣ ಪೂಜೆ ಭಜನೆ ಹೀಗೆ ಎಲ್ಲಾ ರೀತಿಯ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ನಾಲ್ಕು ದಿನಗಳ ಪೂಜೆ ಶಾಸ್ತ್ರೋಕ್ತವಾಗಿ ಇಂದಿಗೂ ನಡೆದುಕೊಂಡು ಬರುತ್ತಿದೆ

ಶ್ರೀಮತಿ ವಿದ್ಯಾಲಕ್ಷ್ಮೀ ವಿಶ್ವನಾಥ

ಗೌರವಾಧ್ಯಕ್ಷರು

ಸೂಕ್ತ ಪ್ರತಿಭೆಗೆ ಪ್ರೋತ್ಸಾಹ

ರಾಮಕ್ಷತ್ರಿಯ ಸಮಾಜದ ಮಕ್ಕಳ ಮತ್ತು ಮಹಿಳೆಯರ ಸೂಕ್ತ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸುವ ಸಲುವಾಗಿ ಪ್ರತಿದಿನ ಸಂಜೆ ಸಾಂಸ್ಕೃತಿಕ ಹಾಗೂ ಸಭಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುತ್ತದೆ ಹಾಗೆಯೇ ವಿವಿಧ ರೀತಿಯ ಸ್ಪರ್ಧೆಗಳನ್ನು ಆಟೋಟ ಸಂಗೀತ ಭಾಷಣ ರಂಗವಲ್ಲಿ ಹೂ ಕಟ್ಟುವುದು ಛದ್ಮವೇಶಗಳನ್ನು ಏರ್ಪಡಿಸಲಾಗುತ್ತದೆ ಧರ್ಮ ಸಂಸ್ಕೃತಿ ಇವುಗಳ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಪಡೆದುಕೊಳ್ಳುವುದಕ್ಕಾಗಿ ಸಂಜೆಯ ಸಭಾ ಕಾರ್ಯಕ್ರಮವನ್ನು ಏರ್ಪಡಿಸಿ ಪೂರ ಪರ ಊರ ಜ್ಞಾನವಂತ ಮಹಿಳೆಯರನ್ನು ಕರೆಸಲಾಗುತ್ತದೆ ಮತ್ತು ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನವನ್ನು ವಿತರಿಸುವುದು ಇಂದಿಗೂ ರೂಢಿಯಾಗಿದೆ

ವಿಜಯದಶಮಿಯಂದು ವಿಜೃಂಭಣೆಯ ಮೆರವಣಿಗೆಯೊಂದಿಗೆ ಶ್ರೀ ಶಾರದಾದೇವಿ ಮೂರ್ತಿಯನ್ನು ನೀರಿನಲ್ಲಿ ವಿಸರ್ಜನೆ ಮಾಡುವುದರೊಂದಿಗೆ ನವರಾತ್ರಿ ಶಾರದೋತ್ಸವ ಮುಕ್ತಾಯಗೊಳ್ಳುತ್ತದೆ

ಇವಕ್ಕೆಲ್ಲ ನಮ್ಮ ಕುಂದಾಪುರದ ರಾಮ ಕ್ಷತ್ರಿಯರ ಸಂಘ ಮತ್ತು ರಾಮಕ್ಷತ್ರಿಯ ಯುವಕ ಮಂಡಳಿಯ ಸರ್ವ ಸದಸ್ಯರ ಹಾಗೂ ಊರ-ಪರಊರ ಬಾಂಧವರ ಸಂಪೂರ್ಣ ಸಹಕಾರ ಸಿಗುತ್ತದೆ ಎಂದು ಈ ವರ್ಷದ ರಾಮಕ್ಷತ್ರಿಯ ಮಹಿಳಾ ಮಂಡಳಿಯ ಅಧ್ಯಕ್ಷರಾದ ಸರೋಜಾ ಅರುಣ್ ಕುಮಾರ್ ಎಸ್ ವಿ ತಿಳಿಸಿದ್ದಾರೆ

1979 ರ ಆಮಂತ್ರಣ ಪತ್ರಿಕೆ

1979ರಲ್ಲಿ ಸ್ಥಾಪನೆಗೊಂಡ ರಾಮಕ್ಷತ್ರಿಯ ಮಹಿಳಾ ಮಂಡಳಿಯ ಪ್ರಥಮ ವರ್ಷದ ನವರಾತ್ರಿ ಮಹೋತ್ಸವದ ಆಮಂತ್ರಣ ಪತ್ರಿಕೆಯು ಕುಂದೇಶ್ವರ ದೇವಸ್ಥಾನದ ಮಾಜಿ ಮೊಕ್ತೇಸರರಾದ ಕೆ ಆರ್‌ ಉಮೇಶ್‌ ರಾವ್‌ ರವರ ಸಂಗ್ರಹದಲ್ಲಿ ದೊರೆತಿದ್ದು

ಅದರಂತೆ ಪ್ರಥಮ ವರ್ಷದ ನವರಾತ್ರಿ ಮಹೋತ್ಸವದ ಸಭಾ ಕಾರ್ಯಕ್ರಮಕ್ಕೆ ಅಂದಿನ ಶಾಸಕರಾಗಿದ್ದ ಮನೋರಮಾ ಮಧ್ವರಾಜ್‌ ರವರು ಮುಖ್ಯ ಅತಿಥಿಯಾಗಿ ಆಗಮಿಸಿದ್ದರು ಅಂದಿನ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಾ. ಛಾಯ ವಿ ಹೆಬ್ಬಾರ್‌ ವಹಿಸಿದ್ದರು ಅಂದಿನಿಂದ ಇಂದಿನವರೆಗೂ ಸಭಾ ಕಾರ್ಯಕ್ರಮದಲ್ಲಿ ಊರ ಪರಊರ ಗಣ್ಯಾತಿಗಣ್ಯರು ಸಭಾ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಲೇ ಇದ್ದಾರೆ

ಶ್ರೀ ರಾಮ ಕ್ಷತ್ರಿಯ ಮಹಿಳಾ ಮಂಡಳಿಯ ಈ ವರ್ಷದ ಧಾರ್ಮಿಕ ಹಾಗೂ ಸಾಂಸ್ಕ್ರತಿಕ ಕಾರ್ಯಕ್ರಮವು ಯಶಸ್ವಿಯಾಗಿ ಜರುಗಲಿ ಎನ್ನುವುದೇ ನಮ್ಮೆಲ್ಲರ ಹೃದಯಾಂತರಾಳದ ಹಾರೈಕೆ   

  • ಕೆ ಗಣೇಶ್‌ ಹೆಗ್ಡೆ,ಕುಂದಾಪುರ

   

Related Articles

error: Content is protected !!