Home » ಆಟಿ ಅಮಾವಾಸ್ಯೆ : ಮಾರಸ್ವಾಮಿ ಜಾತ್ರೆ ಸಂಪನ್ನ
 

ಆಟಿ ಅಮಾವಾಸ್ಯೆ : ಮಾರಸ್ವಾಮಿ ಜಾತ್ರೆ ಸಂಪನ್ನ

by Kundapur Xpress
Spread the love

ಕುಂದಾಪುರ : ಅತ್ತ ಭೋರ್ಗೆರೆಯುವ ಸಮುದ್ರ ಇತ್ತ ಪ್ರಶಾಂತವಾಗಿ ಹರಿಯುವ ಸೌಪರ್ಣಿಕ ನದಿ ಇವೆರಡನ್ನೂ ಸೀಳಿಕೊಂಡು ಹೋಗುವ ರಾಷ್ಟ್ರೀಯ ಹೆದ್ದಾರಿ 66 ಇದು ಮರವಂತೆಯ ಸೊಬಗು 

ಈ ಸೊಬಗಿನ ತಾಣದಲ್ಲಿ ನೆಲೆ ನಿಂತಿರುವ ಮಹಾರಾಜಸ್ವಾಮಿ ಶ್ರೀ ವರಾಹ ದೇವಸ್ಥಾನದಲ್ಲಿ ಕರ್ಕಾಟಕ ಅಮಾವಾಸ್ಯೆ, ಜಾತ್ರೆ ನಿನ್ನೆಗುರುವಾರ ಸಡಗರ ಸಂಭ್ರಮದಿಂದ ಸಂಪನ್ನಗೊಂಡಿತು

ಮಳೆ ನಡುವೆ ಬೆಳಗಿನಿಂದಲೇ ಕೃಷಿಕರು ಸಮೃದ್ಧ ಬೆಳೆಗಾಗಿ ಪೂಜೆ ಸಲ್ಲಿಸಿದರು. ಮೀನುಗಾರರು ಮೀನುಗಾರಿಕೆಯ ಸಮಯದಲ್ಲಿ ಪ್ರಕೃತಿಯ ವಿಕೋಪಗಳಿಂದ ಅವಘಡಗಳು ಸಂಭವಿಸದಂತೆ ಪ್ರಾರ್ಥನೆ ಸಲ್ಲಿಸಿದರು. ಕೆಲವರು ಸಮುದ್ರ ಮತ್ತು ನದಿಗಳಲ್ಲಿ ಪವಿತ್ರ ಸ್ನಾನ ಮಾಡಿ ಶ್ರೀ ದೇವರ ದರ್ಶನ ಪಡೆದು ಅಭಿಷೇಕ, ಪೂಜೆ ಸಲ್ಲಿಸಿ ಕೃತಾರ್ಥರಾದರು

ಜಾತ್ರೆಯ ಅಂಗವಾಗಿ ದೇವಾಲಯಕ್ಕೆ ವಿಶೇಷ ದೀಪಾಲಂಕಾರ ಹಾಗೂ ಪುಷ್ಪಾಲಂಕಾರ ಮಾಡಲಾಗಿತ್ತು ದೇವಾಲಯದೊಳಗೆ ಆಡಳಿತ ಮಂಡಳಿ ಮತ್ತು ಸೇವಾ ವರ್ಗದ ಸದಸ್ಯರು ಸ್ವಯಂಸೇವಕರ ಜತೆಗೂಡಿ ಶುಚಿತ್ವ ಪೂಜೆ, ಭಕ್ತರ ಆಗಮನ-ನಿರ್ಗಮನ, ಹಾಗೂ ಪ್ರಸಾದ ವಿತರಣೆ ಸುಗಮವಾಗಿ ನಡೆಯಲು ಅಗತ್ಯ ವ್ಯವಸ್ಥೆ ಮಾಡಿದ್ದರು ಈ ಸಂದರ್ಭದಲ್ಲಿ ಭಕ್ತರ ಅನುಕೂಲಕ್ಕಾಗಿ ವಿಶೇಷ ಬಿಗಿ ಪೊಲೀಸ್‌ ಬಂದೋಬಸ್ತನ್ನು ಎರ್ಪಡಿಸಲಾಗಿತ್ತು

 

Related Articles

error: Content is protected !!