384
ಕುಂದಾಪುರ : ಸ್ಥಳೀಯ ಮಾರ್ಕೆಟ್ ರಸ್ತೆಯಲ್ಲಿರುವ ನಾಗ ಬೊಬ್ಬರ್ಯ ದೇವಸ್ಥಾನದಲ್ಲಿ ಫೆ.02 ರಂದು ನಡೆಯುವ ನಾಗ ಮಂಡಲೋತ್ಸವದ ಪೂರ್ವಭಾವಿಯಾಗಿ ಇಂದು ಶುಕ್ರವಾರ ಹೊರೆ ಕಾಣೆಕೆ ಸಮರ್ಪಣೆಯಾಗಲಿದೆ
ಸಂಜೆ 4.00 ಗಂಟೆಗೆ ನಗರದ ಶ್ರೀ ಕುಂದೇಶ್ವರ ದೇವಸ್ಥಾನದಿಂದ ಹಸಿರುವಾಣಿ ಮೆರವಣಿಗೆಯು ಹೊರಟು ಮುಖ್ಯರಸ್ತೆಯಲ್ಲಿ ಸಾಗಿ ಹೊಸ ಬಸ್ಟ್ಯಾಂಡ್ ಮೂಲಕ ಮಾರ್ಕೆಟ್ ರಸ್ತೆಗೆ ಬಂದು ನಾಗ ಬೊಬ್ಬರ್ಯ ದೇವಸ್ಥಾನದಲ್ಲಿ ಸಮಾಪನಗೊಳ್ಳಲಿದೆ
ಧಾರ್ಮಿಕ ಕಾರ್ಯಕ್ರಮದ :
ದಿನಾಂಕ 31-01-2025ನೇ ಶುಕ್ರವಾರ ಬೆಳಿಗ್ಗೆ ಗಂಟೆ 8-30ಕ್ಕೆ ತೋರಣ ಮುಹೂರ್ತ ಉಗ್ರಾಣ ಮುಹೂರ್ತ ಗಣಹೋಮ, ಗಾಯತ್ರಿ ಜಪ, ಕಲಶ ಸ್ಥಾಪನೆ, ಕಲಶಾಭಿಷೇಕ, ಮಹಾಪೂಜೆ, ಮಹಾಮಂಗಳಾರತಿ ಮತ್ತು ಪ್ರಸಾದ ವಿತರಣೆ ನಡೆಯಲಿದ್ದು ಸಂಜೆ ಹೊರೆಕಾಣಿಕೆ ಮೆರವಣಿಗೆ ನಡೆಯಲಿದೆ
ಸಂಜೆ ಗಂಟೆ 6-00ಕ್ಕೆ ನಾಗಮಂಡಲ ಮಂಟಪದಲ್ಲಿ ವಾಸ್ತು ಪೂಜೆ, ರಾಕ್ಷೋಘ್ನ ಹೋಮ, ವಾಸ್ತು ಹೋಮ, ಬಲಿ ನಂತರ ಪ್ರಸಾದ ವಿತರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ನಾಗಮಂಡಲೋತ್ಸವ ಸಮಿತಿ ಪ್ರಕಟಣೆ ತಿಳಿಸಿದೆ

