ಕುಂದಾಪುರ : ನಗರದ ಮಾರ್ಕೆಟ್ ರಸ್ತೆಯ ನಾಗಬೊಬ್ಬರ್ಯ ದೇವಸ್ಥಾನದಲ್ಲಿ ಫೆ. 2ರಂದು ನಡೆಯುವ ನಾಗಮಂಡಲೋತ್ಸವದ ಪ್ರಯುಕ್ತ ಸಂಘ ಸಂಸ್ಥೆ ಹಾಗೂ ಭಕ್ತರಿಂದ ಹಸಿರುವಾಣಿಯ ಸಮರ್ಪಣೆ ನಡೆಯಿತು
ನಗರದ ಅಧಿದೇವತೆಯಾದ ಶ್ರೀ ಕುಂದೇಶ್ವರ ದೇವರ ಸನ್ನಿಧಿಯಲ್ಲಿ ನಾಗಮಂಡಲ ಸೇವಾಕರ್ತರಾದ ಕೃಷ್ಣಯ್ಯ ಶೇರಿಗಾರ್ ಹಾಗೂ ಸದಾಶಿವ ಶೇರಿಗಾರ್ ರವರು ವಿಶೇಷ ಪೂಜೆಯನ್ನು ಸಲ್ಲಿಸಿದರು ಶ್ರೀ ಕುಂದೇಶ್ವರ ದೇವಳದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರಾದ ವಾಸುದೇವ ಯಡಿಯಾಳರು ತೆಂಗಿನಕಾಯಿಯನ್ನು ಒಡೆಯುವ ಮೂಲಕ ಪುರಮೆರವಣಿಗೆಗೆ ಚಾಲನೆ ನೀಡಿದರು
ಪುರಮೆರವಣಿಗೆಯು ಕುಂದೇಶ್ವರನ ಸನ್ನಿಧಿಯಿಂದ ವಾಹನದ ಮೂಲಕ ಹೊರಟು ಚಂಡೆ ಕಹಳೆ ಬ್ಯಾಂಡ್ ಸೆಟ್ ಗಳ ವಾದ್ಯದೊಂದಿಗೆ ವೈಭವದ ಮೆರವಣಿಗೆಗೆ ಗೊಂಬೆ ಕುಣಿತ ತಟ್ತಿರಾಯ ಕುಣಿತ ಹಾಗೂ ನೃತ್ಯ ಭಜನಾ ತಂಡಗಳು ಮೆರಗು ನೀಡಿತು
ಈ ಸಂದರ್ಭದಲ್ಲಿ ಶ್ರೀ ಕುಂದೇಶ್ವರ ದೇಗುಲದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರಾದ ವಾಸುದೇವ ಯಡಿಯಾಳ್ ಸದಸ್ಯರಾದ ನಾಗರಾಜ್ ನಾಯ್ಕ್ ವಿಠಲ್ ಕುಂದರ್ ನಾಗಬೊಬ್ಬರ್ಯ ದೇಗುಲದ ಪ್ರಧಾನ ಅರ್ಚಕರಾದ ನಾರಾಯಣ ಹೊಳ್ಳ ಕುಂದಾಪುರ ಪುರಸಭೆಯ ಸದಸ್ಯರಾದ ದೇವಕಿ ಸಣ್ಣಯ್ಯ ಶ್ರೀಧರ್ ಶೇರುಗಾರ್ ಶಶಿರಾಜ್ ಪೂಜಾರಿ ಉದ್ಯಮಿ ಅಶೋಕ್ ಬೆಟ್ಟಿನ್ ವಿವಿಧ ಸಂಘ ಸಂಸ್ಥೆಗಳ ಅಧ್ಯಕ್ಷರು ಮತ್ತು ಸದಸ್ಯರು ನಾಗಬೊಬ್ಬರ್ಯ ದೇವಸ್ಥಾನದ ಸಮಿತಿಯ ಸದಸ್ಯರು ಹಾಗೂ ವಿವಿಧ ಮಹಿಳಾ ಮಂಡಳಿ ಸದಸ್ಯೆಯರು ವಿವಿಧ ಸ್ತ್ರೀ ಶಕ್ತಿ ಸಂಘಗಳ ಮಹಿಳಾ ಸದಸ್ಯೆಯರು ಪೂರ್ಣಕುಂಭ ಸ್ವಾಗತದೊಂದಿಗೆ ಬಂದ ಮೆರವಣಿಗೆಯು ನಾಗಬೊಬ್ಬರ್ಯ ದೇವಸ್ಥಾನದಲ್ಲಿ ಸಮಾಪನಗೊಂಡಿತು