ಕುಂದಾಪುರ: ಸುಮಾರು 4 ಶತಮಾನಗಳ ಇತಿಹಾಸ ಹೊಂದಿರುವ ಕುಂದಾಪುರ ಸರಕಾರಿ ಆಸ್ಪತ್ರೆಯ ಹಿಂಬದಿಯಲ್ಲಿರುವ ಪ್ರಾಚೀನ ಶ್ರೀ ನಂದಿಕೇಶ್ವರ ದೇವಸ್ಥಾನದ ನೂತನ ಶಿಲಾಮಯ ದೇಗುಲದ ಪುನರ್ ಪ್ರತಿಷ್ಠೆ, ಬ್ರಹ್ಮಕಲಶೋತ್ಸವದ ಧಾರ್ಮಿಕ ವಿಧಿವಿಧಾನಗಳಿಗೆ ನಿನ್ನೆ ಭಾನುವಾರ ಚಾಲನೆ ನೀಡಲಾಯಿತು.
ವಿದ್ವಾನ್ ಕೋಟ ಕೆ.ಚಂದ್ರಶೇಖರ ಸೋಮಯಾಜಿ ಮತ್ತು ಮಕ್ಕಳು ಧಾರ್ಮಿಕ ವಿಧಿಗಳಿಗೆ ಚಾಲನೆ ನೀಡಿದರು. ಸಾಮೂಹಿಕ ಪ್ರಾರ್ಥನೆ, ಪುಣ್ಯಾಹ, ನಾಂದಿ ಗಣವತಿಯಾಗ, ಬಿಂಬ ಶುದ್ಧಿ ಹೋಮ, ಸ್ಥಾನ ಶುದ್ಧಿ, ಪ್ರಾಸಾದ ಶುದ್ಧಿ, ರಾಕ್ಟೋಘ್ನ ಹೋಮ ವಾಸ್ತುಪೂಜೆ, ಪ್ರತಿಷ್ಠಾಧಿವಾಸಾದಿ ಹೋಮಗಳು ಜರುಗಿದವು. ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಡಾ.ನಾಗೇಶ್, ಜೀರ್ಣೋದ್ದಾರ ಸಮಿತಿ ಅಧ್ಯಕ್ಷ ಯು.ರಾಧಾಕೃಷ್ಣ ಸಮಿತಿಯ ಪದಾಧಿಕಾರಿಗಳು ಊರ ಭಕ್ತಾದಿಗಳು ಉಪಸ್ಥಿತರಿದ್ದರು