ಕುಂದಾಪುರ : ಯಾವುದೇ ಕಾರ್ಯವು ನಿರ್ವೀಘ್ನವಾಗಿ ನೆರವೇರಿ ಯಶಸ್ಸು ಕೀರ್ತಿ ವಿಜಯ ಸಂಪಾದಿಸಲು ಮನುಷ್ಯನ ಹಗಲಿರುಳು ಪ್ರಯತ್ನದೊಂದಿಗೆ ಭಗವಂತನ ಅನುಗ್ರಹವು ಅತೀ ಮುಖ್ಯವಾಗಿದೆ ಎಂದು ಪೇಜಾವರ ಮಠಾಧೀಶ ಹಾಗೂ ಅಯೋಧ್ಯಾ ರಾಮ ಮಂದಿರ ತೀರ್ಥಕ್ಷೇತ್ರ ಟ್ರಸ್ಟ್ ವಿಶ್ವಸ್ಥರಾದ ಶ್ರೀ ಶ್ರೀ ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿಯವರು ನುಡಿದರು
ಅವರು ಕುಂದಾಪುರ ನಗರದ ಮುಖ್ಯ ರಸ್ತೆಯಲ್ಲಿರುವ ಸರಕಾರಿ ಆಸ್ಪತ್ರೆಯ ಹಿಂಬಾಗದಲ್ಲಿರುವ ಶ್ರೀ ನಂದಿಕೇಶ್ವರ ನೂತನ ಶಿಲಾಮಯ ದೇಗುಲದ ಪುನಃಪ್ರತಿಷ್ಠೆಯ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು
ಆಸ್ಪತ್ರೆಯ ವೈಧ್ಯಾದಿಕಾರಿ ಡಾ.ನಾಗೇಶ್ ಹಾಗೂ ಜೀರ್ಣೊದ್ದಾರ ಸಮಿತಿಯ ಅಧ್ಯಕ್ಷರಾದ ಯು.ರಾಧಾಕೃಷ್ಣರವರ ಅವಿರತ ಶ್ರಮದಿಂದ ದೇಗುಲವು ಸುಂದರವಾಗಿ ಮೂಡಿಬಂದಿದ್ದು ನೆಲೆನಿಂತ ನಂದಿಕೇಶ್ವರನು ಎಲ್ಲರಿಗೂ ಉನ್ನತಿ ಹಾಗೂ ನೆಮ್ಮದಿಯನ್ನು ನೀಡುವ ಶ್ರದ್ಧಾ ಕೇಂದ್ರವಾಗಲಿ ಎಂದು ಹಾರೈಸಿದರು

ಧಾರ್ಮಿಕ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹೊಟೇಲ್ ಉದ್ಯಮಿ ಕೃಷ್ಣಮೂರ್ತಿ ಮಂಜರು ವಹಿಸಿದ್ದರು ವೇದಿಕೆಯಲ್ಲಿ ಉದಯ ಜ್ಯುವೆಲ್ಲರ್ಸ್ ಮಾಲಕರಾದ ಉದಯ್ ಶೇಟ್ ಉಪಸ್ಥಿತರಿದ್ದರು ವೈದ್ಯಕೀಯ ಮತ್ತು ಧಾರ್ಮಿಕ ಸೇವೆಗಾಗಿ ಡಾ.ಉದಯಶಂಕರ್ ಹಾಗೂ ಡಾ.ಚಂದ್ರಶೇಖರ್ ರವರನ್ನು ಸ್ವಾಮೀಜಿಯವರು ಸನ್ಮಾನಿಸಿದರು
ರಾಜಶೇಖರ್ ಹೆಗ್ಡೆ ನಿರೂಪಿಸಿದ ಕಾರ್ಯಕ್ರಮದಲ್ಲಿ ಪ್ರಕಾಶ್ಚಂದ್ರ ಶೆಟ್ಟ ಸ್ವಾಗತಿಸಿ ಪ್ರಸ್ತಾವನೆಗೈದರು ಪ್ರಭಾಕರ್ ಧನ್ಯವಾದವಿತ್ತರು ಸಂಜೆ 7.00 ಕ್ಕೆ ಹನುಮಗಿರಿ ಮೇಳದವರಿಂದ ಶುಕ್ರನಂದನೆ ಯಕ್ಷಗಾನ ಪ್ರದರ್ಶನಗೊಂಡಿತು

