ಕುಂದಾಪುರ : ಇಲ್ಲಿನ ಖಾರ್ವಿಕೇರಿ ಶ್ರೀ ಮಹಾಕಾಳಿ ದೇವಸ್ಥಾನದಲ್ಲಿ ಶರನ್ನವರಾತ್ರಿ,ಮಹೋತ್ಸವ ಅ.3ರಿಂದ 12 ರ ವರೆಗೆ ಜರುಗಲಿದೆ.ಅ.3ರಂದು ಸಂಜೆ 6.00 ರಿಂದ ಸ್ಥಳೀಯ ಭಜನಾ ಮಂಡಳಿಯವರಿಂದ ಭಜನೆ, ರಾತ್ರಿ 7.30ಕ್ಕೆ ಕಲಶ ಸ್ಥಾಪನೆ, ಪ್ರಾರ್ಥನೆ, ಮಹಾಪೂಜೆ, ಅಷ್ಟಾವಧಾನ ಸೇವೆ, ಪ್ರಸಾದ ವಿತರಣೆ ನಡೆಯಲಿದೆ. ಅ.4ರಿಂದ 11 ರವರೆಗೆ ಪ್ರತಿದಿನ ಸಂಜೆ 6.30ಕ್ಕೆ ಸ್ಥಳೀಯ ಭಜನಾ ಮಂಡಳಿಯವರಿಂದ ಭಜನಾ ಕಾರ್ಯಕ್ರಮ,ರಾತ್ರಿ 8ರಿಂದ ಮಹಾಪೂಜೆ, ಅಷ್ಟಾವಧಾನ ಸೇವೆ, ಪ್ರಸಾದ ವಿತರಣೆ ನಡೆಯಲಿದೆ.
ಬೆಳಗ್ಗೆ 6.00 ಗಂಟೆಗೆ ಕದಿರು ಪೂಜೆ ಹೊಸತು ಆಚರಣೆ ಪ್ರಯುಕ್ತ ಭಕ್ತಾದಿಗಳಿಗೆ ಕದಿರು ವಿತರಣೆ ನಡೆಯಲಿದೆ.ಅ.11ರಂದು ಬೆಳಗ್ಗೆ 8.00 ಗಂಟೆಗೆ ಸಾಮೂಹಿಕ ಚಂಡಿಕಾ ಹೋಮ,ಪೂರ್ಣಾಹುತಿ, ಪಲ್ಲಪೂಜೆ,ವಿಶೇಷ ಅಲಂಕಾರ ಪೂಜೆ,ತೀರ್ಥಪ್ರಸಾದ ವಿತರಣೆ ಬಳಿಕ ಸೇವಾಕರ್ತರಿಂದ ಸಾರ್ವಜನಿಕ ಮಹಾ ಅನ್ನ ಸಂತರ್ಪಣೆ ನಡೆಯಲಿದೆ.
ಅ.12ರಂದು ವಿಜಯದಶಮಿ ಪ್ರಯುಕ್ತ ಸಂಜೆ 5.30ರಿಂದ ವಿಶೇಷ ರಂಗಪೂಜೆ, 6.30ರ ಗೋಧೂಳಿ ಸುಮುಹೂರ್ತದಲ್ಲಿ ಶ್ರೀ ಮಹಾಕಾಳಿ ಅಮ್ಮನವರ ಪುಷ್ಪಾಲಂಕೃತ ಪಲ್ಲಕ್ಕಿ ಉತ್ಸವದ ಪುರ ಮೆರವಣಿಗೆ ಕುಂದಾಪುರ ಮುಖ್ಯ ರಸ್ತೆ ಮೂಲಕ ಸಾಗಿ, ಪಾರಿಜಾತ ಸರ್ಕಲ್‌ನಿಂದ ತಿರುಗಿ, ಖಾರ್ವಿ-ಮೇಲೇರಿ ರಸ್ತೆಯಲ್ಲಿರುವ ಶ್ರೀ ನಾಗಜಟ್ಟಿಗೇಶ್ವರ ದೇವಳಕ್ಕೆ ತೆರಳಿ ವಿಶೇಷ ಪೂಜೆ, ಪ್ರಸಾದ ವಿತರಣೆಯೊಂದಿಗೆ ನವರಾತ್ರಿ ಉತ್ಸವ ಸಂಪನ್ನಗೊಳ್ಳಲಿದೆ ಎಂದು ದೇವಳದ ಪ್ರಕಟಣೆ ತಿಳಿಸಿದೆ.