Home » ಮಹಿಳಾ ಭಜನಾ ತಂಡದಿಂದ ಭಜನಾ ಕಾರ್ಯಕ್ರಮ
 

ಮಹಿಳಾ ಭಜನಾ ತಂಡದಿಂದ ಭಜನಾ ಕಾರ್ಯಕ್ರಮ

by Kundapur Xpress
Spread the love

ಕೋಟ : ನಾಗಾಚಲ ಶ್ರೀ ಅಯ್ಯಪ್ಪ ಸ್ವಾಮಿ ಮತ್ತು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಆನೆಗುಡ್ಡೆ ಕುಂಭಾಶಿ ಕುಂದಾಪುರ ಇಲ್ಲಿ ಶೃಂಗೇರಿ ಶಂಕರ ಮಠ ಲೋಕಾರ್ಪಣೆ ಮತ್ತು ನಾಗಮಂಡಲೋತ್ಸವ ಪ್ರಯುಕ್ತ ವಿವಿಧ ಧಾರ್ಮಿಕ ಕಾರ್ಯಕ್ರಮಗಳ ಪ್ರಯುಕ್ತ 10 ದಿನಗಳ ನಿತ್ಯ ಭಜನಾ ಉತ್ಸವ ಕಾರ್ಯಕ್ರಮದ ಅಂಗವಾಗಿ ಕೋಟದ ಪಂಚವರ್ಣ ಮಹಿಳಾ ಭಜನಾ ತಂಡದಿಂದ ಭಜನಾ ಕಾರ್ಯಕ್ರಮ ಜರಗಿತು.ಈ ಸಂದರ್ಭದಲ್ಲಿ ಶ್ರೀ ಶಾರದಾ ಪೀಠಂ ಇದರ ಪ್ರಾಂತಿಯ ಧರ್ಮಮಾಧಿಕಾರಿ ವೇದಮೂರ್ತಿ ಲೋಕೇಶ್ ಅಡಿಗ ಇವರು ಪ್ರಸಾದ ವಿತರಿಸಿ ಗೌರವಿಸಿದರು. ಕಾರ್ಯಕ್ರಮದ ಭಜನಾ ವ್ಯವಸ್ಥಾಪಕರಾದ ಜಯಕರ್ ಪೂಜಾರಿ ಗುಲ್ವಾಡಿ ಮತ್ತು ತಾಲ್ಲೂಕು ಒಕ್ಕೂಟದ ಕಾರ್ಯದರ್ಶಿ ನಿತಿನ್ ವಿಠಲವಾಡಿ ಮತ್ತಿತರರು ಇದ್ದರು.

 

Related Articles

error: Content is protected !!