ಶ್ರೀ ಮೈಲಾರೇಶ್ವರ ಅಷ್ಠಬಂಧ ಪ್ರತಿಷ್ಠೆ
ಕುಂದಾಪುರ: ಶ್ರೀ ಮೈಲಾರೇಶ್ವರ ಅಷ್ಠಬಂಧ ಬ್ರಹ್ಮಕಲಶೋತ್ಸವ ನಿಮಿತ್ತ ಶುಕ್ರವಾರ ಬೆಳಿಗ್ಗೆ ರತ್ನನ್ಯಾಸ ಪೂರ್ವಕ ಶ್ರೀ ಮೈಲಾರೇಶ್ವರ ಮತ್ತು ಪರಿವಾರ ದೇವರುಗಳ ಅಷ್ಠಬಂಧ ಪ್ರತಿಷ್ಠೆಯು ವಿದ್ವಾನ್.ಕೆ.ಚಂದ್ರಶೇಖರ ಸೋಮಯಾಜಿಯವರ ನೇತೃತ್ವದಲ್ಲಿ ನಡೆಯಿತು. ಕಲಾಭಿವೃದ್ಧಿ ಹೋಮ, ಕಲಾತತ್ವಕಲಾಶಾಭಿಷೇಕ, ಮಹಾಪೂಜೆ ಹಾಗೂ ಅನ್ನಸಂತರ್ಪಣೆಯೊಂದಿಗೆ ನೆರವೇರಿತು.

ಸಂಜೆ ನಡೆದ ಸಭಾಕಾರ್ಯಕ್ರಮದಲ್ಲಿ ದೇವಸ್ಥಾನದ ಅಧ್ಯಕ್ಷರಾದ ಕೆ. ರಮೇಶ್.ಬಿಲ್ಲವ ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷರಾದ ಅಶೋಕ್ ಬೆಟ್ಟಿನ್ ಪ್ರಧಾನ ಕಾರ್ಯದರ್ಶಿ ಕೆ ಸೂರ್ಯಕಾಂತ್ ಹಾಗೂ ಕುಂದೇಶ್ವರ ದೇವಸ್ಧಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರಾದ ಕೃಷ್ಣಾನಂದ ಚಾತ್ರ, ಪುರಸಭೆ ಅಧ್ಯಕ್ಷೆಯಾದ ವೀಣಾ ಭಾಸ್ಕರ ಮೆಂಡನ್, ಮಾಜಿ ಪುರಸಭೆ ಸದಸ್ಯರಾದ ನಾಗರಾಜ ಕಾಮಧೇನು,ಗುತ್ತಿಗೆದಾರರಾದ ರಾಜೇಶ್ ಕಾರಂತ್ ಹಾಗೂ ದಿನೇಶ್ ಹೆಗ್ಡೆ ಮೊಳಹಳ್ಳಿ
ದಿನೇಶ್ ಪ್ರಿಂಟರ್ಸನ ಮಾಲಕರಾದ ದಿನೇಶ್ ಕುಂದಾಪುರ ಉದಯ ಜ್ಯುವೆಲ್ಲರ್‌ನ ಉದಯ ಶೇಟ್ ಮಂಜುನಾಥ ಆಸ್ಪತ್ರೆಯ ನಿರ್ಧೇಶಕರಾದ ಡಾ.ಎಂ.ವಿ.ಕುಲಾಲ್,ಉಡುಪಿ ಧಾರ್ಮಿಕ ಪರಿಷತ್ ಇದರ ಸದಸ್ಯರಾದ ಸಾಮ್ರಾಟ್ ಶೆಟ್ಟಿ ಹಳ್ನಾಡು ಹಾಗೂ ಮೈಲಾರೇಶ್ವರ ಯುವಕ ಮಂಡಲದ ಅಧ್ಯಕ್ಷರಾದ ಜಿ.ಆರ್.ಪ್ರಕಾಶ್ ಉಪಸ್ದಿತರಿದ್ದರು.




