ಉಡುಪಿ : ಪರ್ಯಾಯ ಪುತ್ತಿಗೆ ಮಠ, ಶ್ರೀಕೃಷ್ಣ ಮಠದ ವತಿಯಿಂದ ನಡೆಯುತ್ತಿರುವ ಬೃಹತ್ ಗೀತೋತ್ಸವದ ಅಂಗವಾಗಿ ಶನಿವಾರ ಭಗವದ್ಗೀತಾ ಯಜ್ಞವು ಸಂಪನ್ನಗೊಂಡಿತು.
ದೇಶ ವಿದೇಶಗಳಿಂದ ಆಗಮಿಸಿದ್ದ ಶ್ರೀ ಮಠದ ಭಕ್ತರು ಸಮಗ್ರ ಭಗವದ್ಗೀತಾ ಪಾರಾಯಣವನ್ನು ಮಾಡಿದರು. ಶ್ರೀಮಠದಯೋಗೇಂದ್ರ ಭಟ್ ಹೋಮವನ್ನು ನೆರವೇರಿಸಿದರು. ಪರ್ಯಾಯ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರತೀರ್ಥರು ಮಾತನಾಡಿ ಭಗವದ್ಗೀತೆಯಲ್ಲಿ ಎಲ್ಲ ಕಾರ್ಯಗಳನ್ನು ಯಜ್ಞವಾಗಿ ಪರಿವರ್ತಿಸಿಕೊಂಡ ತನ್ಮೂಲಕ ಭಗವದನುಗ್ರಹವನ್ನು ಸಂಪಾದಿಸಿಕೊಳ್ಳುವ ಉಪಾಯವನ್ನು ಶ್ರೀ ಕೃಷ್ಣ ಪರಮಾತ್ಮ ಲೋಕಕ್ಕೆ ತಿಳಿಸಿದ್ದಾನೆ. ಅಂತಹ ಪವಿತ್ರ ಗ್ರಂಥದ ಶ್ಲೋಕಗಳ ಮೂಲಕವೇ ಯಜ್ಞವನ್ನು ಆಚರಿಸುವುದು ಬಹಳ ಔಚಿತ್ಯ ಪೂರ್ಣ, ಭಾಗವಹಿಸಿದವರೆಲ್ಲರಿಗೂ ಶ್ರೀಕೃಷ್ಣನ ಪರಮಾನುಗ್ರಹವಾಗಲಿ ಎಂದು ಹಾರೈಸಿದರು. ಪರ್ಯಾಯ ಕಿರಿಯ ಶ್ರೀ ಸುಶೀಂದ್ರತೀರ್ಥರು ಉಪಸ್ಥಿತರಿದ್ದರು.