ಉಡುಪಿ : ತುಳುಶಿವಳ್ಳಿ ಮಾಧ್ವ ಬ್ರಾಹ್ಮಣ ಮಹಾಮಂಡಲ ಮತ್ತು ಪರ್ಯಾಯ ಮತ್ತಿಗೆ ಮಠ, ಶ್ರೀಕೃಷ್ಣ ಮಠ ಉಡುಪಿ ಇದರ ಜಂಟಿ ಆಶ್ರಯದಲ್ಲಿ ತುಳಸಿ ಸಂಕೀರ್ತನೆ ಸ್ಪರ್ಧೆಯು ಬಹಳ ವಿಜೃಂಭಣೆಯಿಂದ ಜರಗಿತು. ಸಂಜೆ ಮಧ್ವ ಮಂಟಪದಲ್ಲಿ ನಡೆದ ಬಹುಮಾನ ವಿತರಣಾ ಸಮಾರಂಭದಲ್ಲಿ ಪರ್ಯಾಯ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರತೀರ್ಥರು ಆಶೀರ್ವಚನ ನೀಡಿ, ಸನಾತನ ಧರ್ಮದ ಉಳಿಯುವಿಕೆಯ ನೆಲೆಯಲ್ಲಿ ತುಳಸಿ ಸಂಕೀರ್ತನೆಯು ಅತ್ಯಂತ ಮಹತ್ವಪೂರ್ಣವಾಗಿದೆ. ಇದನ್ನು ಉಳಿಸಿ ಬೆಳೆಸುವಲ್ಲಿ ಇಂದಿನ ಜನಾಂಗದ ಮಕ್ಕಳು ಇದರ ಉಪಯೋಗವನ್ನು ಪಡೆದುಕೊಂಡು ತುಳಸಿ ಸಂಕೀರ್ತನೆಯನ್ನು ಮನೆ ಮನೆಯಲ್ಲಿ ನಡೆಸಬೇಕೆಂದು ತಿಳಿಸಿದರು.
ಪಾಜಕ ಮಠದ ಹಿರಿಯ ವಿದ್ವಾಂಸ ಮಾಧವ ಉಪಾಧ್ಯಾಯರನ್ನು ಈ ಬಾರಿ ಮಧ್ವಾನುಗ್ರಹ ಪ್ರಶಸ್ತಿ ನೀಡಿ ಶ್ರೀಗಳು ಗೌರವಿಸಿದರು. ಈ ಸಂದರ್ಭದಲ್ಲಿ ಪರ್ಯಾಯ ಪುತ್ತಿಗೆ ಮಠದ ಕಿರಿಯ ಶ್ರೀ ಸುಶ್ರೀಂದ್ರತೀರ್ಥರು, ತುಳುಶಿವಳ್ಳಿ ಮಾಧ್ವ ಮಹಾಮಂಡಲದ ಗೌರವಾಧ್ಯಕ್ಷ ಅರವಿಂದ ಆಚಾರ್ಯ, ನಿಕಟಪೂರ್ವ ಅಧ್ಯಕ್ಷ ರವಿಪ್ರಕಾಶ್ ಭಟ್, ನಗರಸಭಾ ಸದಸ್ಯ ಅಮೃತ ಕೃಷ್ಣಮೂರ್ತಿ, ದಾನಿಗಳಾದ ಸುಬ್ರಮಣ್ಯ ತಂತ್ರಿ ಉಪಸ್ಥಿತರಿದ್ದರು. ಅಧ್ಯಕ್ಷ ಜಯರಾಮ ಆಚಾರ್ಯ ಸ್ವಾಗತಿಸಿ, ಕಾರ್ಯದರ್ಶಿ ರವೀಂದ್ರ ಆಚಾರ್ಯ ಧನ್ಯವಾದವಿತ್ತರು.

