Home » ಶ್ರೀ ಮಹಾಲಿಂಗೇಶ್ವರ ದೇಗುಲ : ದ್ವಿತೀಯ ವರ್ಷದ ವರ್ಧಂತಿ
 

ಶ್ರೀ ಮಹಾಲಿಂಗೇಶ್ವರ ದೇಗುಲ : ದ್ವಿತೀಯ ವರ್ಷದ ವರ್ಧಂತಿ

by Kundapur Xpress
Spread the love

ಕೋಟ: ಇಲ್ಲಿನ ಗಿಳಿಯಾರು ಹರ್ತಟ್ಟುವಿನ ಕಲ್ಲಟ್ಟು ಶ್ರೀ ಮಹಾಲಿಂಗೇಶ್ವರ ದೇಗುಲದ ದ್ವಿತೀಯ ವರ್ಷದ ವರ್ಧಂತಿ ಉತ್ಸವ ಕಾರ್ಯಕ್ರಮ ಮಂಗಳವಾರ ಸಂಪನ್ನಗೊAಡಿತು.
ಶ್ರೀ ದೇಗುಲದ ಪ್ರಧಾನ ಅರ್ಚಕ ಸುಧೀರ್ ಐತಾಳ್ ನೇತೃತ್ವದಲ್ಲಿ ಧಾರ್ಮಿಕ ಕಾರ್ಯಕ್ರಮಗಳಾದ ದ್ವಿತೀಯ ವರ್ಧಂತಿ ಉತ್ಸವದ ಅಂಗವಾಗಿ ಶ್ರೀ ಮಹಾಲಿಂಗೇಶ್ವರ ದೇವರಿಗೆ ನವಕ ಪ್ರಧಾನ ದ್ರವ್ಯ ಕಲಶ ಸ್ನಪನಾಧಿವಾಸ ಹೋಮ, ಶ್ರೀಷ್ಟೋಪಮಂತ್ರ, ಕಲಶಾಭಿಷೇಕ, ಮಹಾಪೂಜೆ ಕಾರ್ಯಕ್ರಮಗಳು ಜರಗಿದವು.
ಅಪರಾಹ್ನ ಮಹಾಸಾರ್ವಜನಿಕ ಅನ್ನಸಂತರ್ಪಣೆ ,ಕೋಟದ ಪಂಚವರ್ಣ ಮಹಿಳಾ ಭಜನಾ ತಂಡ ಮತ್ತು ವಿಪ್ರ ಮಹಿಳಾ ವಲಯ ಸಾಲಿಗ್ರಾಮ ಇವರಿಂದ ಭಜನಾ ಕಾರ್ಯಕ್ರಮಗಳು ,ರಾತ್ರಿ ಮಹಾರಂಗಪೂಜೆ ಇತ್ಯಾಧಿ ಕಾರ್ಯಕ್ರಮಗಳು ನೆರವೆರಿತು.
ದೇಗುಲದ ಆಡಳಿತ ಮಂಡಳಿಯ ಅಧ್ಯಕ್ಷ ಶೇವಧಿ ಸುರೇಶ್ ಗಾಣಿಗ ಮತ್ತು ಅಂಬಿಕಾ ಎಸ್ ಗಾಣಿಗ ಧಾರ್ಮಿಕ ವಿಧಿವಿಧಾನದಲ್ಲಿ ಭಾಗಿಯಾದರು.
ದೇಗುಲದಲ್ಲಿ ಬೊಬ್ಬರ್ಯ ದೇವರ ದರ್ಶನ ಸೇವೆ,ನಾಗ ಸಾನಿಧ್ಯಕ್ಕೆ ವಿಶೇಷ ಪೂಜೆ ಸಂಪನ್ನಗೊAಡಿತು.ಈ ಸಂದರ್ಭದಲ್ಲಿ ದೇಗುಲದ ಆಡಳಿತ ಮಂಡಳಿಯ ಕಾರ್ಯದರ್ಶಿ ಹರೀಷ್ ದೇವಾಡಿಗ,ಪ್ರಮುಖರಾದ ಗೋಪಾಲಕೃಷ್ಣ ಮಯ್ಯ,ಚಂದ್ರಿಕಾ ಭಟ್, ಸಿದ್ಧ ದೇವಾಡಿಗ, ಶೇಖರ್ ದೇವಾಡಿಗ,ತಿಮ್ಮ ಕಾಂಚನ್,ಶೇವಧಿ ನಾಗರಾಜ್ ಗಾಣಿಗ,ಸಂತೋಷ್ ಪೂಜಾರಿ,ರಾಜು ಪೂಜಾರಿ ಹೋಬಳಿಮನೆ,ಗಿರೀಶ್ ದೇವಾಡಿಗ,ಬಾಬು ಶೆಟ್ಟಿ,ಚಂದ್ರ ಹಾಡಿಕೆರೆ,ಶಾಂತಾ ಪ್ರಕಾಶ್,ಸಂತೋಷ್ ದೇವಾಡಿಗ, ಕೀರ್ತೀಶ್ ಪೂಜಾರಿ,ಪ್ರದೀಪ್ ದೇವಾಡಿಗ,ಆದರ್ಶ ಶೆಟ್ಟಿ ಮತ್ತಿತರರು ಇದ್ದರು.

 

Related Articles

error: Content is protected !!