ಕುಂದಾಪುರ : ವಿಶ್ವ ರಾಮಕ್ಷತ್ರಿಯ ಮಹಾಸಂಘದ ಆಶ್ರಯದಲ್ಲಿ ರಾಮಕ್ಷತ್ರಿಯ ಸಮಾಜದ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಸಮಾಜದ ಶ್ರೇಯೋಭಿವೃದ್ಧಿಗಾಗಿ ಇಂದು ಆದಿತ್ಯವಾರ ಮಹಾ ಮೃತ್ಯುಂಜಯ ಹೋಮ ಮತ್ತು ಚಂಡಿಕಾ ಹೋಮ ಹಾಗೂ 108 ತೆಂಗಿನಕಾಯಿ ಗಣಹೋಮ ಮುಂತಾದ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದೆ
ಇಂದು ಬ್ರಹ್ಮಾವರ ತಾಲೂಕಿನ ಶ್ರೀಮಠ ಬಾಳೆಕುದ್ರು ಹಂಗರಕಟ್ಟೆಯಲ್ಲಿ ಹೋಮ ಹವನಾದಿಗಳು ನಡೆಯಲಿದ್ದು ಪೂರ್ವಾಹ್ನ 11:30ಕ್ಕೆ ಪೂರ್ಣಾಹುತಿ ನಡೆಯಲಿದೆ
11:30 ರಿಂದ ಶ್ರೀನಿವಾಸ ಯುನಿವರ್ಸಿಟಿ ಇದರ ಸಂಶೋಧನಾ ಮಾರ್ಗದರ್ಶಕರಾದ ಡಾ. ಸೋಂದ ಭಾಸ್ಕರ್ ಭಟ್ ಅವರು ಪ್ರವಚನ ನೀಡಲಿದ್ದು ಶ್ರೀ ಶ್ರೀ ನೃಸಿಂಹ ಸ್ವಾಮಿಜಿ ಶ್ರೀ ಮಠ ಬಾಳೆಕುದ್ರು ಹಂಗಾರ ಕಟ್ಟೆಯ ಶ್ರೀ ಶ್ರೀ ನೃಸಿಂಹ ಸ್ವಾಮೀಜಿಯವರು ಆಶೀರ್ವಚನ ನೀಡಲಿದ್ದಾರೆ ಮಧ್ಯಾಹ್ನ 1.00 ಗಂಟೆಗೆ ಮಹಾ ಅನ್ನ ಸಂತರ್ಪಣೆ ಜರುಗಲಿದೆ ಎಲ್ಲಾ ಧಾರ್ಮಿಕ ಪುಣ್ಯಕಾರ್ಯದಲ್ಲಿ ಕುಟುಂಬ ಸಮೇತರಾಗಿ ಸಮಾಜದ ಬಂಧುಗಳು ಭಾಗವಹಿಸಬೇಕೆಂದು ವಿಶ್ವ ರಾಮ ಕ್ಷತ್ರಿಯ ಸಂಘದ ಅಧ್ಯಕ್ಷರಾದ ಎಚ್ ಆರ್ ಶಶಿಧರ ನಾಯ್ಕ್ ಹಾಗೂ ಪದಾಧಿಕಾರಿಗಳು ವಿನಂತಿಸಿಕೊಂಡಿದ್ದಾರೆ