Home » ಅರುಣಾಚಲದಿಂದ ಬೈಕಿನಲ್ಲಿ ಉಡುಪಿಗೆ
 

ಅರುಣಾಚಲದಿಂದ ಬೈಕಿನಲ್ಲಿ ಉಡುಪಿಗೆ

by Kundapur Xpress
Spread the love

ಉಡುಪಿ : ಕೊರೊನಾ ಕಾಲಘಟ್ಟದಲ್ಲಿ ಸಾಂಕ್ರಾಮಿಕ ರೋಗ ಹಾವಳಿ ಬಗ್ಗೆ ಜ್ಯೋತಿಷ್ಯಾಧಾರಿತ ವಾಗಿ ಖಚಿತ ವಾಗಿ ಪರಿಹಾರ ನೀಡಿ ಯೂಟ್ಯೂಬ್ ಮುಂತಾದ ಸಾಮಾಜಿಕ ಜಾಲ ತಾಣಗಳ ಮೂಲಕ ಲಕ್ಷಾಂತರ ಸದಸ್ಯರನ್ನು ಹೊಂದಿ ತನ್ನ ಕಿರು ವಯಸ್ಸಿನಲ್ಲಿಯೇ ಅತ್ಯಂತ ಪ್ರಸಿದ್ದಿಯನ್ನು ಹೊಂದಿದ ಕುಮಾರ ಅಭಿಘ್ಯಾ ಇವರು ಪೂಜ್ಯ ಪರ್ಯಾಯ ಶ್ರೀಪಾದರಿಂದ ಭಗವದ್ಗೀತಾ ಲೇಖನ ಯಜ್ಞ ದ ದೀಕ್ಷೆ ಪಡೆದರು.

ಇದಕ್ಕಾಗಿಯೇ ಅರುಣಾಚಲದ ತನ್ನ ಊರಿನಿಂದ ಉಡುಪಿಗೆ ಬೈಕ್ ಮೂಲಕ ಬಂದ ಸಾಹಸಿ ಈತ  ಶ್ರೀಕೃಷ್ಣನ ವಿಶೇಷ ಭಕ್ತನಾಗಿ ಒಳ್ಳೆಯ ಸಂಸ್ಕಾರ ಪಡೆದ ಅಭಿಜ್ಞಾ ಪೂಜ್ಯ ಶ್ರೀಪಾದರ ಕೋಟಿ ಗೀತಾ ಲೇಖನ ಯಜ್ಞದ ಮಾಹಿತಿಯನ್ನು ಸಾಮಾಜಿಕ ಜಾಲತಾಣದಿಂದ ಪಡೆದು ಉಡುಪಿಗೆ ಆಗಮಿಸಿದ್ದು ವಿಶೇಷವಾಗಿದೆ.

ಪೂಜ್ಯ ಪರ್ಯಾಯ ಪುತ್ತಿಗೆ ಶ್ರೀಪಾದರು ಈತನಿಗೆ ಇನ್ನಷ್ಟು ಸಮಾಜ ಸೇವೆ ಮಾಡುವಂತಾಗಲಿ ಎಂದು ಹರಸಿ ಭಗವದ್ಗೀತಾ ಲೇಖನ ದೀಕ್ಷೆ ಯನ್ನಿತ್ತು ಹರಸಿದರು

 

Related Articles

error: Content is protected !!