Home » ಶ್ರೀ ಶ್ರೀ ಸುಬುಧೇಂದ್ರ ಯತಿಗಳಿಂದ ಶ್ರೀ ಕೃಷ್ಣ ದರ್ಶನ.
 

ಶ್ರೀ ಶ್ರೀ ಸುಬುಧೇಂದ್ರ ಯತಿಗಳಿಂದ ಶ್ರೀ ಕೃಷ್ಣ ದರ್ಶನ.

ಮಂತ್ರಾಲಯ ಮಠಾಧೀಶರು

by Kundapur Xpress
Spread the love

ಉಡುಪಿ : ಪರ್ಯಾಯ ಮಠಾದೀಶರಾದ ಪರಮಪೂಜ್ಯ ಶ್ರೀ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರ ಆಹ್ವಾನದ ಮೇರೆಗೆ ತಮ್ಮ ಪರ್ಯಾಯ ಕಾಲದಲ್ಲಿ ಪ್ರಥಮ ಬಾರಿಗೆ ಉಡುಪಿಗೆ ಆಗಮಿಸಿದ ಮಂತ್ರಾಲಯ ಶ್ರೀಪಾದರನ್ನು ಶ್ರೀಕೃಷ್ಣ ಮಠದಲ್ಲಿ ಸಾಂಪ್ರದಾಯಿಕ ಪೂರ್ಣಕುಂಭ ಸ್ವಾಗತ ದೊಂದಿಗೆ ಪುತ್ತಿಗೆ ಯತಿದ್ವಯರು ಆದರದಿಂದ ಬರಮಾಡಿಕೊಂಡರು.

ಬಳಿಕ ಶ್ರೀ ಕೃಷ್ಣ ಮುಖ್ಯಪ್ರಾಣರ ದರ್ಶನ ಪಡೆದ ಪೂಜ್ಯ ಶ್ರೀಪಾದರನ್ನು ಗಂಧಾದ್ಯುಪಚಾರಗಳಿಂದ ಸತ್ಕರಿಸಿದ ಪೂಜ್ಯ ಪರ್ಯಾಯ ಶ್ರೀಪಾದರು ತಮ್ಮ ಮಠಕ್ಕೂ ಮಂತ್ರಾಲಯ ಮಠಕ್ಕೂ ಇರುವ ಅವಿನಾಭಾವ ಮಧುರ ಸಂಬಂಧಗಳನ್ನು ಸ್ಮರಿಸಿ ಮುಂದೆಯೂ ಇದು ಶಾಶ್ವತವಾಗಿ ಮುಂದುವರೆಯಲಿ ಎಂದು ಹಾರೈಸಿದರು 

ನಮ್ಮ ಮಂತ್ರಾಲಯ ರಾಘವೇಂದ್ರ ಮಠದ ಪೀಠದಲ್ಲಿ ಬಂದ ಅನೇಕ ಯತಿ ಗಳ ಮತ್ತು ಉಡುಪಿ ಪುತ್ತಿಗೆ ಮಠದ ಪೀಠ ದಲ್ಲಿ ಬಂದ ಅನೇಕ ಯತಿಗಳ ಹೆಸರು ಒಂದೇ ಆಗಿದೆ ಎ0ದು ಉಲ್ಲೇಖಿ ಸಿದ ಸುಬುದೇಂದ್ರ ತೀರ್ಥ ಶ್ರೀಪಾದರು ಸುಗುಣೇ 0ದ್ರ ತೀರ್ಥರು ಕೂಡಾ ನಮ್ಮ ಪೂರ್ವಿಕ ಯತಿಗಳಲ್ಲೊಬ್ಬರು ಎಂದು ಸ್ಮರಿಸಿ ಈ ಪುತ್ತಿಗೆ ಮಠದ ಶ್ರೀ ಗಳು ನನಗೆ ಅಣ್ಣನ ಸಮಾನ ಇವರ ಚತುರ್ಥ ಪರ್ಯಾಯಕ್ಕೆ ತಮ್ಮ  ಶಾರ್ಟ್ ವಿಸಿಟ್ ಇದು. ಮತ್ತೆ ಸಂಸ್ಥಾನ ಸಮೇತ ಆಗಮಿಸುತ್ತೇವೆ ಎ0ದರು

ಈ ಸಂದರ್ಭದಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿ ರಾಜ್ಯಸಭಾ ಸದಸ್ಯ ಡಾಕ್ಟರ್ ವೀರೇಂದ್ರ ಹೆಗ್ಗಡೆ ಯವರೂ ಉಪಸ್ಥಿತರಿದ್ದು ದೇವರ ದರ್ಶನ ಪಡೆದರು.
ಪೂಜ್ಯ ಪರ್ಯಾಯ ಶ್ರೀಪಾದರು ತಮ್ಮೆಲ್ಲರ ಹೆಸರಿನಲ್ಲಿಯೂ ಇಂದ್ರ ಪದ ಸೇರಿದ್ದು , ಉಡುಪಿ , ಧರ್ಮಸ್ಥಳ, ಮಂತ್ರಾಲಯಗಳ ಪ್ರತಿನಿಧಿಗಳು ಒಂದೆಡೆ ಇಂದು ಸೇರಿದ್ದು ತ್ರಿವೇಣಿ ಸಂಗಮ ಸದೃಶವಾಗಿ ಒಂದರ್ಥದಲ್ಲಿ ಮಹಾ ಕುಂಭ ನೆನೆಪಿಸುವಂತಿದೆ ಎಂದು ಪ್ರಶಂಸಿಸಿದರು.
ಆತ್ಮೀಯರಾದ ಹೆಗ್ಗಡೆಯವರನ್ನು ಉಭಯ ಶ್ರೀಪಾದರೂ ಗೌರವಿಸಿ ಆಶೀರ್ವದಿಸಿದರು. ದಿವಾನರಾದ ಶ್ರೀ ನಾಗರಾಜಾಚಾರ್ಯ,ಕಾರ್ಯದರ್ಶಿ ಪ್ರಸನ್ನ ಆಚಾರ್ಯ, ರತೀಶ ತಂತ್ರಿ ಮತ್ತು ಮಠದ ವಿದ್ವಾಂಸರು ಅನೇಕ ಭಕ್ತರು ಉಪಸ್ಥಿತರಿದ್ದರು.

 

Related Articles

error: Content is protected !!