48
ಕುಂದಾಪುರ : ನಗರದ ಚಿಕ್ಕನಸಾಲು ರಸ್ತೆಯಲ್ಲಿರುವ ಶ್ರೀ ಮೈಲಾರೇಶ್ವರ ದೇವಸ್ಥಾನದಲ್ಲಿ ಶಿವರಾತ್ರಿಯ ಪ್ರಯುಕ್ತ ಇಂದು ಹೂವಿನ ಅಲಂಕಾರ ದೀಪಾಲಂಕಾರ ಹಾಗೂ ಶತರುದ್ರಾಭೀಷೇಕ ನಡೆಯಲಿದ್ದು ಮಧ್ಯಾಹ್ನ 01.00 ಗಂಟೆಗೆ ಮಹಾಪೂಜೆಯೊಂದಿಗೆ ಪ್ರಸಾದ ವಿತರಣೆ ನಡೆಯಲಿದೆ.
ಸಂಜೆ 8.3೦ಕ್ಕೆ ರಂಗ ಪೂಜೆಯೊಂದಿಗೆ ಪ್ರಸಾದ ವಿತರಣೆ ನಡೆಯಲಿದೆ ಹಾಗೆ ರಾತ್ರಿ 12.00ಕ್ಕೆ ವಿಶೇಷ ಪೂಜೆ ನಡೆಯಲಿದೆ.ಈ ಎಲ್ಲಾ ಕಾರ್ಯಕ್ರಮಗಳು ಶ್ರೀ ಮೈಲಾರೇಶ್ವರ ಯುವಕ ಮಂಡಲದ ವತಿಯಿಂದ ಜರುಗಲಿರುವುದು. ದೇವಸ್ಥಾನದ ವತಿಯಿಂದ ಉತ್ಸವ ಮೂರ್ತಿಯನ್ನು ಒಳಾಂಗಣ ಪೌಳಿ ಸುತ್ತಲೂ ಪೂಜಿಸಲ್ಪಡುವುದು.
ತಾವು ಇಷ್ಟಮಿತ್ರರೊಡಗೂಡಿ ಶ್ರೀ ದೇವರ ಪ್ರಸಾದ ಸ್ವೀಕರಿಸಿ, ಶ್ರೀ ಮೈಲಾರೇಶ್ವರನ ಪೂರ್ಣಾನುಗ್ರಹಕ್ಕೆ ಪಾತ್ರರಾಗಬೇಕಾಗಿ ಅಪೇಕ್ಷಿಸುವ, ಶ್ರೀ ಮಂಜುನಾಥ ಭಟ್ ಅರ್ಚಕರು ,ಶ್ರೀ ಕೆ. ಮಧುಕರ,ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರು ಹಾಗೂ ವ್ಯವಸ್ಥಾಪನಾ ಸಮಿತಿ ಸದಸ್ಯರು.

