Home » ಆಮಂತ್ರಣ ಪತ್ರಿಕೆ ಬಿಡುಗಡೆ
 

ಆಮಂತ್ರಣ ಪತ್ರಿಕೆ ಬಿಡುಗಡೆ

ಶ್ರೀಕೃಷ್ಣ ಮಾಸೋತ್ಸವ

by Kundapur Xpress
Spread the love

ಉಡುಪಿ : ಪರ್ಯಾಯ ಶ್ರೀಪುತ್ತಿಗೆ ಮಠಾಧೀಶರಾದ ಪೂಜ್ಯ ಸುಗುಣೇಂದ್ರ ತೀರ್ಥ ಶ್ರೀಪಾದರು ಈ ಬಾರಿ ಉಡುಪಿಯ ಪ್ರಸಿದ್ಧ ಹಬ್ಬವಾದ ಶ್ರೀಕೃಷ್ಣಜನ್ಮಾಷ್ಟಮಿಯನ್ನು ಅತ್ಯಂತ ವೈಭವದಿಂದ ಮಾಸೋತ್ಸವ ,ಡೋಲೋತ್ಸವ ,ಲಡ್ಡೂತ್ಸವ ಎಂಬಿತ್ಯಾದಿಯಾಗಿ ಹಲವು ವಿಧದಲ್ಲಿ ಆಚರಿಸಲು ಸಂಕಲ್ಪಿಸಿದ್ದಾರೆ .
ಇದರ ಅಂಗವಾಗಿ ಟೀಕಾಚಾರ್ಯರ ಪುಣ್ಯದಿನವಾದ ಇಂದು ರಾಜಾಂಗಣದಲ್ಲಿ ನಡೆದ ವಿದ್ವಾಂಸರ ಸಭೆಯಲ್ಲಿ ಪೂಜ್ಯ ಭಂಡಾರಿಕೇರಿ ಮಠಾಧೀಶರಾದ ಶ್ರೀ ಶ್ರೀವಿದ್ಯೇಶ ತೀರ್ಥ ಶ್ರೀಪಾದರು ಈ ಶ್ರೀಕೃಷ್ಣ ಮಾಸೋತ್ಸವ ದ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಿದರು.

 

Related Articles

error: Content is protected !!