ಕುಂದಾಪುರ:ನಮ್ಮ ಕರಾವಳಿ ಪ್ರದೇಶವು ಪರಶುರಾಮನ ಸೃಷ್ಟಿಯಾಗಿದ್ದು ಇಲ್ಲಿ ನಾಗಾರಾಧನೆಯು ವಿಶೇಷವಾಗಿದ್ದು ನಾಗದೇವರು ನಡೆದಾಡುವ ಪ್ರತ್ಯಕ್ಷ ದೇವರು ಎಂದು ಮೊಳಹಳ್ಳಿ ದಿನೇಶ್ ಹೆಗ್ಡೆ ನುಡಿದರು ಕುಂದಾಪುರದ ಚಿಕ್ಕನ್ ಸಾಲ್ ರಸ್ತೆಯ ರಾಣುಮಕ್ಕಿ ರಿಕಾರ್ಡ್ ನಾಗಬೊಬ್ಬರ್ಯ ಬನದ 24 ನೇ ವರ್ಷದ ವಾರ್ಷೀಕೋತ್ಸವದ ಅಧ್ಯಕ್ಷತೆಯನ್ನು ವಹಿಸಿದ್ದರು
ಮುಖ್ಯ ಅತಿಥಿಗಳಾಗಿ ಗಣೇಶ ಬೆಟ್ಟಿನ್ ಯು ಶಿವಾನಂದ ರಾವ್ ನಾಗರಾಜ್ ಎನ್ ಶೆಟ್ಟಿ ಸಾಂಸ್ಕ್ರತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿದವರಿಗೆ ಬಹುಮಾನ ವಿತರಿಸಿದರು ನಾಗರಾಜ್(ಗಾಯತ್ರಿ) ಹಾಗೂ ಅಶೋಕ್ ಬೆಟ್ಟಿನ್ ರವರನ್ನು ಸನ್ಮಾನಿಸಲಾಯಿತು ವೇದಿಕೆಯಲ್ಲಿ ಗೌರವಾಧ್ಯಕ್ಷರಾದ ಕೆ ಆರ್ ಉಮೇಶ್ ರಾವ್ ಅಧ್ಯಕ್ಷರಾದ ಕೆ ಪಿ ಅರುಣ್ ನಾಗರಾಜ್ ನಾಯ್ಕ್ ಮಧುಕರ್ ಉಪಸ್ಥಿತರಿದ್ದರು ಡಿ ಸತೀಶ್ ಹಾಗೂ ಡಿ ಕೆ ಪ್ರಭಾಕರ್ ಕಾರ್ಯಕ್ರಮದ ನಿರೂಪಿಸಿ ಮಧುಕರ್ ಧನ್ಯವಾದವಿತ್ತರು