64
ನವದೆಹಲಿ : ಭಾರತ ಹಾಗೂ ಪಾಕಿಸ್ತಾನ ನಡುವಿನ ಸಂಘರ್ಷ ಹಿನ್ನೆಲೆಯಲ್ಲಿ ಸ್ಥಗಿತಗೊಂಡಿದ್ದ 18ನೇ ಆವೃತ್ತಿಯ ಐಪಿಎಲ್ ಪಂದ್ಯಾಟವು ಮೇ 17ರಂದು ಪುನಾರಂಭಗೊಳ್ಳಲಿದೆ. ಸೋಮವಾರ ಐಪಿಎಲ್ ಆಡಳಿತ ಮಂಡಳಿಯು 17 ಪಂದ್ಯಗಳ ಪರಿಷ್ಕೃತ ವೇಳಾಪಟ್ಟಿ ಪ್ರಕಟಿಸಿತು.
ಮೇ 17ರಂದು ಆರ್‌ಸಿಬಿ ಹಾಗೂ ಕೋಲ್ಕತಾ ನಡುವೆ ಬೆಂಗಳೂರಿನಲ್ಲಿ ಮೊದಲ ಪಂದ್ಯ ನಡೆಯಲಿದೆ. ಬಳಿಕ ಮೇ23ರಂದು ಆರ್‌ಸಿಬಿ-ಸನ್‌ರೈಸರ್ಸ್ ನಡುವೆ ಮತ್ತೊಂದು ಪಂದ್ಯಕ್ಕೆ ಬೆಂಗಳೂರು ಆತಿಥ್ಯ ವಹಿಸಲಿದೆ. ಲೀಗ್ ಹಂತದ ಪಂದ್ಯಗಳು ಮೇ 27ರಂದು ಕೊನೆ ಗೊಳ್ಳಲಿವೆ.ಮೇ29 ರಿಂದ ನಾಕೌಟ್ ಹಂತ ಶುರುವಾಗಲಿದ್ದು ಜೂ.3 ರಂದು ಫೈನಲ್ ನಿಗದಿಯಾಗಿದೆ.

