Home » ಇಂಗ್ಲೆಂಡ್‌ ವಿರುದ್ದ ಕ್ಲೀನ್‌ ಸ್ವೀಪ್
 

ಇಂಗ್ಲೆಂಡ್‌ ವಿರುದ್ದ ಕ್ಲೀನ್‌ ಸ್ವೀಪ್

ಮೂರು ಪಂದ್ಯಗಳ ಸರಣಿ 3-0

by Kundapur Xpress
Spread the love

ಅಹಮದಾಬಾದ್‌ : ಮಹತ್ವದ ಐಸಿಸಿ ಚಾಂಪಿಯನ್ಸ್  ಟ್ರೋಫಿಗೆ ಭಾರತ ತಂಡ ತನ್ನ ಸಿದ್ಧತೆಯನ್ನು ಭರ್ಜರಿಯಾಗಿಯೇ ಮುಗಿಸಿದೆ. ಇಂಗ್ಲೆಂಡ್ ವಿರುದ್ಧ ತವರಿನ ಏಕದಿನ ಸರಣಿಯಲ್ಲಿ ರೋಹಿತ್ ಶರ್ಮಾ ಪಡೆ 3-0 ಅಂತರದಲ್ಲಿ ಕ್ಲೀನ್‌ಸ್ವೀಪ್ ಸಾಧಿಸಿ, ಚಾಂಪಿಯನ್ಸ್ ಟ್ರೋಫಿಗೆ ಮುನ್ನ ಆತ್ಮವಿಶ್ವಾಸವನ್ನು ಹೆಚ್ಚಿಸಿಕೊಂಡಿದೆ

ಬುಧವಾರ ನಡೆದ 3ನೇ ಹಾಗೂ ಕೊನೆಯ ಎಕದಿನ ಪಂದ್ಯದಲ್ಲಿ ಭಾರತ 142 ರನ್ ಜಯಭೇರಿ ಬಾರಿಸಿತು. ಟಿ-20 ಸರಣಿ ಬಳಿಕ ಏಕದಿನದಲ್ಲೂ ಇಂಗ್ಲೆಂಡ್ ಹೀನಾಯ ಸೋಲಿನ ಮುಖಭಂಗಕ್ಕೆ ಒಳಗಾಯಿತು.

ಆರಂಭಿಕ 2 ಪಂದ್ಯಗಳಲ್ಲಿ ಚೇಸ್ ಮಾಡಿ ಗೆದ್ದಿದ್ದ ಭಾರತಕ್ಕೆ ಈ ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡುವ ಅವಕಾಶ ಸಿಕ್ಕಿತು. ಇದನ್ನು ತಂಡ ವ್ಯರ್ಥಗೊಳಿಸಲಿಲ್ಲ. ಶುಭಮನ್ ಗಿಲ್, ಶ್ರೇಯಸ್‌ ಅಯ್ಯರ್, ವಿರಾಟ್ ಕೊಹ್ಲಿ, ಕೆ.ಎಲ್.ರಾಹುಲ್ ಅಬ್ಬರದ ಆಟದಿಂದಾಗಿ ಭಾರತ 50 ಓವರ್‌ಗಳಲ್ಲಿ 356 ರನ್‌ಗೆ ಆಲೌಟಾಯಿತು. ಬೌಲಿಂಗ್‌ನಲ್ಲೂ ಜಾದೂ ಮಾಡಿದ ಭಾರತ ಇಂಗ್ಲೆಂಡ್‌ ತಂಡವನ್ನು 214 ರನ್ನುಗಳಿಗೆ ಕಟ್ಟಿಹಾಕಿ ವಿಜಯಭೇರಿ ಭಾರಿಸಿತು

 

Related Articles

error: Content is protected !!