Home » ಶ್ರೀ ಮೈಲಾರೇಶ್ವರ ಯುವಕ ಮಂಡಲ : ನಾಳೆ ವಾರ್ಷಿಕ ಕ್ರೀಡಾಕೂಟ
 

ಶ್ರೀ ಮೈಲಾರೇಶ್ವರ ಯುವಕ ಮಂಡಲ : ನಾಳೆ ವಾರ್ಷಿಕ ಕ್ರೀಡಾಕೂಟ

by Kundapur Xpress
Spread the love

ಕುಂದಾಪುರ : ನಗರದ ಚಿಕ್ಕನಸಾಲು ರಸ್ತೆಯಲ್ಲಿರುವ ರಾಜ್ಯ ಪ್ರಶಸ್ತಿ ವಿಜೇತ ಶ್ರೀ ಮೈಲಾರೇಶ್ವರ ಯುವಕ ಮಂಡಲದ ಶಿವರಾತ್ರಿ ಮಹೋತ್ಸವ ಹಾಗೂ 48ನೇ ಸಂಭ್ರಮದ ವಾರ್ಷಿಕೋತ್ಸವದ ಇದೇ ತಿಂಗಳ 26 ರಂದು ಜರುಗಲಿದ್ದು ಆ ಪ್ರಯುಕ್ತ ವಾರ್ಷಿಕ ಕ್ರೀಡಾಕೂಟವನ್ನು ನಾಳೆ ಹಮ್ಮಿಕೊಳ್ಳಲಾಗಿದೆ

ಕುಂದಾಪುರ ನಗರದ ಚಿಕನಸಾಲು ರಸ್ತೆಯಲ್ಲಿರುವ ಶ್ರೀ ತಾಯಿ ಬಗಳಾಂಬ ದೇವಸ್ಥಾನದ ಬಳಿಯ ಬಯಲಿನಲ್ಲಿ ಕ್ರೀಡೋತ್ಸವವು ನಾಳೆ ಜರುಗಳಿದ್ದು ಬೆಳಿಗ್ಗೆ 9.30ಕ್ಕೆ ಸಾಂಸ್ಕೃತಿಕ ಹಾಗೂ ಕ್ರೀಡಾಕೂಟದ ಉದ್ಘಾಟನೆ ನಡೆಯಲಿದೆ ಕ್ರೀಡಾಕೂಟವನ್ನು ಕುಂದಾಪುರದ ಕೋಡಿಯ ಶ್ರೀರಾಮ ವಿದ್ಯಾ ಕೇಂದ್ರ ಇದರ ಸಂಚಾಲಕರದ ಕೋಡಿ ನಾಗೇಶ್ ಕಾಮತ್ ಉದ್ಘಾಟಿಸಲಿದ್ದಾರೆ

ಸಭಾಧ್ಯಕ್ಷರಾಗಿ ಶ್ರೀ ಮೈಲಾರೇಶ್ವರ ಯುವಕ ಮಂಡಲದ ಗೌರವ ಅಧ್ಯಕ್ಷರಾದ ಜಿ ಆರ್ ಪ್ರಕಾಶ್ ಹಾಗೂ ಮುಖ್ಯ ಅತಿಥಿಗಳಾಗಿ ಮೈಯದ್ದಿ ಗುಲ್ವಾಡಿ ಪ್ರಸಾದ್ ಶೆಟ್ಟಿ, ರಾಜೇಶ್ ಕೋಟೇಶ್ವರ ಕಾರ್ತಿಕ್‌ ಕೋಟೆಗಾರ್, ಮಿಥುನ್ ಕುಮಾರ್ ಹಾಗೂ ಕಾರ್ತಿಕ್ ಎಸ್‌ ಕೆ ಭಾಗವಹಿಸಲಿದ್ದಾರೆ ಎಂದು ಶ್ರೀ ಮೈಲಾರೇಶ್ವರ ಯುವಕ ಮಂಡಲದ ಅಧ್ಯಕ್ಷರಾದ ಶರತ್‌ ಕೆ ಎಸ್ ಹಾಗೂ ಕಾರ್ಯದರ್ಶಿ ಶ್ರೀನಾಥ್ ಕೋಟೆ ತಿಳಿಸಿದ್ದು ವೇದಿಕೆಯಲ್ಲಿ ಕ್ರೀಡಾ ಕಾರ್ಯದರ್ಶಿ ಅರುಣ್‌ ಬಾಣ ಹಾಗೂ ಸಾಂಸ್ಕ್ರತಿಕ ಕಾರ್ಯದರ್ಶಿ ನಾಗರಾಜ್‌ ದಫೇದಾರ್‌ ಉಪಸ್ಥಿತರಿರುತ್ತಾರೆ

 

Related Articles

error: Content is protected !!