238
ಕುಂದಾಪುರ : ನಗರದ ಬಿ ಬಿ ರಸ್ತೆಯಲ್ಲಿರುವ ಬಿ ಬಿ ಫ್ರೆಂಡ್ಸ್ ಇವರ ಆಶ್ರಯದಲ್ಲಿ ಕುಂದಾಪುರ ತಾಲೂಕು ಮಟ್ಟದ ಹೊನಲು ಬೆಳಕಿನ ಶೆಟಲ್ ಬ್ಯಾಡ್ಮಿಂಟನ್ ಪಂದ್ಯಾಟವನ್ನು ಕುಂದಾಪುರ ಪುರಸಭೆಯ ಮಾಜಿ ಅಧ್ಯಕ್ಷರಾದ ಮೋಹನದಾಸ್ ಶೆಣೈಯವರು ಉದ್ಘಾಟಿಸಿ ಮಾತನಾಡಿ ಪಂದ್ಯಾಟದಲ್ಲಿ ಸೋಲು ಗೆಲುವುಗಳನ್ನು ಸಮಾನಾಗಿ ಸ್ವೀಕರಿಸಿ ಕ್ರೀಡಾ ಸ್ಪೂರ್ತಿಯನ್ನು ಮೆರೆಯಬೇಕು ಯಾವುದೇ ಗೊಂದಲಗಳಿಗೆ ಅವಕಾಶ ಮಾಡಿ ಕೊಡದೇ ಪಂದ್ಯಾಟವು ಯಶಸ್ವಿಯಾಗಿ ಜರುಗಲಿ ಎಂದು ಶುಭ ಹಾರೈಸಿದರು
ಉದಯ ಜ್ಯವೆಲ್ಲರ್ಸ್ ಮಾಲಕರಾದ ಉದಯ್ ಶೇಟ್ ಮುಖ್ಯ ಅತಿಥಿಯಾಗಿ ಆಗಮಿಸಿ ಶುಭ ಹಾರೈಸಿದರು
ಬಿ ಬಿ ಫ್ರೆಂಡ್ಸ್ ಇದರ ಅಧ್ಯಕ್ಷರಾದ ಸತೀಶ್ ಹೊಳ್ಳ ಹಾಗೂ ಗೌರವ ಅಧ್ಯಕ್ಷರಾದ ಗಣೇಶ್ ಕಾಮತ್ ಮತ್ತು ಹರೀಶ್ ವೆಂಕಟೇಶ್ ಕಾಮತ್ ಹಾಗೂ ಸರ್ವ ಸದಸ್ಯರು ಉಪಸ್ಥಿತರಿದ್ದು ಹೊನಲು ಬೆಳಕಿನ ಶೆಟಲ್ ಬ್ಯಾಡ್ಮಿಂಟನ್ ಪಂದ್ಯಾಟಕ್ಕೆ ಚಾಲನೆ ನೀಡಿದರು

