ಬೆಂಗಳೂರು : ಸತತ ಏಳು ಗೆಲುವುಗಳನ್ನು ದಾಖಲಿಸಿ ಸೆಮಿಫೈನಲ್ ಪ್ರವೇಶಿಸಿರುವ ಭಾರತ ಕ್ರಿಕೆಟ್ ತಂಡ ಇಂದು ವಿಶ್ವಕಪ್ ನಲ್ಲಿ ಬಲಿಷ್ಠ ದಕ್ಷಿಣ ಆಫ್ರಿಕಾ ತಂಡವನ್ನು ಎದುರಿಸಲಿದೆ ಈ ಪಂದ್ಯವನ್ನು ಗೆದ್ದು ಸತತ ಎಂಟನೇ ಗೆಲುವಿನ ಮೇಲೆ ರೋಹಿತ್ ಪಡೆ ಕಣ್ಣಿಟ್ಟಿದೆ ಇಡನ್ ಗಾರ್ಡನ್ಸ್ ಮೈದಾನದಲ್ಲಿ ನಡೆಯಲಿರುವ ಪಂದ್ಯದಲ್ಲಿ ರೋಚಕ ಕದನವನ್ನು ನಿರೀಕ್ಷಿಸಲಾಗಿದೆ ರೋಹಿತ್ ಶರ್ಮ ನೇತೃತ್ವದ ಭಾರತ ತಂಡ ಆಡಿದ ಏಳು ಪಂದ್ಯಗಳನ್ನು ಗೆದ್ದು ಟೂರ್ನಿಯಲ್ಲಿ ಅಜೇಯ ಓಟ ಮುಂದುವರಿಸಿದೆ ದಕ್ಷಿಣ ಆಫ್ರಿಕ ತಂಡ 7 ಪಂದ್ಯಗಳನ್ನು ಆಡಿದ್ದು 6 ರಲ್ಲಿ ಗೆದ್ದು ಒಂದರಲ್ಲಿ ಸೋತು ಅಂಕಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ ಭಾರತ ತಂಡದ ಆಟಗಾರ ವಿರಾಟ್ ಕೊಹ್ಲಿ ಆಸ್ಟ್ರೇಲಿಯಾ ವಿರುದ್ಧ 85 ನ್ಯೂಜಿಲ್ಯಾಂಡ್ ವಿರುದ್ಧ 95 ರನ್ ಹಾಗೂ ಶ್ರೀಲಂಕಾ ವಿರುದ್ಧ 88 ಹೊಡೆದು ಶತಕ ವಂಚಿತರಾಗಿದ್ದರು ಇದೀಗ ತಮ್ಮ 35 ನೇ ಹುಟ್ಟು ಹಬ್ಬದ ಸಂದರ್ಭದಲ್ಲಿ ಅವರಿಂದ ಶತಕವನ್ನು ನಿರೀಕ್ಷಿಸಲಾಗಿದೆ