Home » ಇಂದಿನಿಂದ ಭಾರತ-ದ.ಆಫ್ರಿಕಾ T-20 ಕದನ
 

ಇಂದಿನಿಂದ ಭಾರತ-ದ.ಆಫ್ರಿಕಾ T-20 ಕದನ

by Kundapur Xpress
Spread the love

ಡರ್ಬನ್ : 2026 ರ ಟಿ-20 ವಿಶ್ವಕಪ್‌ಗೆ ಬಲಿಷ್ಠ ತಂಡ ಕಟ್ಟುವ ದೃಷ್ಟಿಯಿಂದ ಮಹತ್ವ ಪಡೆದಿರುವ ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಿನ ನಾಲ್ಕು ಪಂದ್ಯಗಳ ಟಿ-20 ಸರಣಿಗೆ ಇಂದು ಶುಕ್ರವಾರ ಚಾಲನೆ ಸಿಗಲಿದೆ. 4 ಪಂದ್ಯಗಳ ಸರಣಿಯ ಮೊದಲ ಪಂದ್ಯಕ್ಕೆ ಡರ್ಬನ್ ಕ್ರೀಡಾಂಗಣ ಆತಿಥ್ಯ ವಹಿಸಲಿದೆ. ಟಿ-20 ವಿಶ್ವಕಪ್ ಫೈನಲ್ ಬಳಿಕ ಉಭಯ ತಂಡಗಳು ಮೊದಲ ಬಾರಿ ಮುಖಾಮುಖಿಯಾಗುತ್ತಿದ್ದು ಟಿ-20ಯಲ್ಲಿ ಕುತೂಹಲ ಹೆಚ್ಚಿಸಿದೆ. 

ಸೂರ್ಯಕುಮಾ‌ರ್ ಯಾದವ್ ನಾಯಕತ್ವದಲ್ಲಿ ಕಣಕ್ಕಿಳಿಯಲಿರುವ ತಂಡದಲ್ಲಿ ತಜ್ಞ ಟಿ-20 ಆಟಗಾರರೇ ಇದ್ದಾರೆ.ಹೀಗಾಗಿ ತಂಡದಲ್ಲಿ ಅವಕಾಶ ಗಿಟ್ಟಿಸಿಕೊಳ್ಳಲು ಮತ್ತು ಸಿಕ್ಕ ಸ್ಥಾನ ಗಟ್ಟಿಗೊಳಿಸಲು ಪೈಪೋಟಿ ಹೆಚ್ಚಿದೆ. ಟಿ-20ಯ ಹೊಸ ಆರಂಭಿಕ ಜೋಡಿಯಾಗಿರುವ ಅಭಿಷೇಕ್ ಶರ್ಮಾ ಹಾಗೂ ಸಂಜು ಸ್ಯಾಮ್ಸನ್ ಎಷ್ಟರ ಮಟ್ಟಿಗೆ ಯಶಸ್ಸು ಸಾಧಿಸಲಿದ್ದಾರೆ చంబ ಕುತೂಹಲವಿದೆ. ಅಭಿಷೇಕ್ ಜುಲೈನಲ್ಲಿ ಜಿಂಬಾವೆ ವಿರುದ್ಧ 47 ಎಸೆತಕ್ಕೆ ಶತಕ ಬಾರಿಸಿದ್ದರು.

 

Related Articles

error: Content is protected !!