Home » ಕೊನೆ ಟೆಸ್ಟ್‌ ಪಂದ್ಯದಲ್ಲಿ ಭಾರತ ಜಯಭೇರಿ
 

ಕೊನೆ ಟೆಸ್ಟ್‌ ಪಂದ್ಯದಲ್ಲಿ ಭಾರತ ಜಯಭೇರಿ

ಸರಣಿ 2 : 2 ಸಮಬಲ

by Kundapur Xpress
Spread the love

ಲಂಡನ್‌ : ಭಾರೀ ಕುತೂಹಲ, ಹೋರಾಟ, ವಿವಾದ ಹಾಗೂ ನಾಟಕೀಯ ಬೆಳವಣಿಗೆಗಳಿಗೆ ಸಾಕ್ಷಿಯಾದ ಈ ಬಾರಿಯ ತೆಂಡುಲ್ಕರ್-ಆ್ಯಂಡರ್‌ಸನ್ ಸರಣಿ ಅಷ್ಟೇ ರೋಚಕವಾಗಿ ಕೊನೆಗೊಂಡಿದೆ. ದಿ ಓವಲ್ ಕ್ರೀಡಾಂಗಣದಲ್ಲಿ ಭಾರೀ ಥ್ರಿಲ್ಲರ್‌ ಕ್ಷಣಗಳನ್ನು ಕಟ್ಟಿಕೊಟ್ಟ $ ನೇ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಟೀಂ ಇಂಡಿಯಾ 6 ರನ್‌ಗಳ ರೋಚಕ ಜಯಭೇರಿ ಬಾರಿಸಿತು. ಇದರೊಂದಿಗೆ 5 ಪಂದ್ಯಗಳ ಸರಣಿ 2-2ರಲ್ಲಿ ಡಾಗೊಂಡಿತು.

2 ಬಲಿಷ್ಠ ತಂಡಗಳ ನಡುವಿನ ಕೊನೆ ಪಂದ್ಯ ಭಾನುವಾರವೇ ಕೊನೆಗೊಳ್ಳಬೇಕಿತ್ತು. ಆದರೆ ಕೋಟ್ಯಂತರ ಕ್ರಿಕೆಟ್ ಅಭಿಮಾನಿಗಳು ಕಾದು ಕುಳಿತಿದ್ದ ಮತ್ತೊಂದು ಕ್ರೈಮ್ಯಾಕ್ಸ್ ಕ್ಷಣಗಳನ್ನು ಸೋಮವಾರಕ್ಕೆ ಮುಂದೂಡಿದ್ದು ಮಳೆರಾಯ. 374 ರನ್‌ಗಳ ದೊಡ್ಡ ಗುರಿ ಪಡೆದಿದ್ದ ಇಂಗ್ಲೆಂಡ್‌ಗೆ ಕೊನೆ ದಿನ 35 ರನ್ ಅಗತ್ಯವಿತ್ತು. ಭಾರತಕ್ಕೆ ಸರಣಿ ಸಮಬಲಗೊಳಿಸಲು 4 ವಿಕೆಟ್‌ಗಳು ಬೇಕಿತ್ತು.

 

Related Articles

error: Content is protected !!