107
ನವದೆಹಲಿ : ‘ಲಡಾಮ್‌ನಲ್ಲಿ ಚೀನಾ ಸೇನೆಯು ಭಾರತಕ್ಕೆ ಸೇರಿದ 2000 ಚದರ ಕಿಲೋಮೀಟರ್ ವ್ಯಾಪ್ತಿಯಷ್ಟು ಜಾಗವನ್ನು ಅತಿಕ್ರಮಿಸಿದೆ.. ಚೀನಾ ಸೇನೆಯು ಭಾರತೀಯ ಸೈನಿಕರ ಮೇಲೆ ಹಲ್ಲೆ ಮಾಡಿದೆ ಎಂಬ ಲೋಕಸಭೆಯ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಹೇಳಿಕೆ ಬಗ್ಗೆ ಸುಪ್ರೀಂಕೋರ್ಟ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ‘ಇಂಥ ಹೇಳಿಕೆ ಬಗ್ಗೆ ನಿಮ್ಮ ಬಳಿ ಏನು ಸಾಕ್ಷ್ಯವಿದೆ ?’ ಎಂದು ಪ್ರಶ್ನಿಸಿರುವ ಕೋರ್ಟ್ ‘ನೀವು ನಿಜ ಭಾರತೀಯನಾಗಿದ್ದರೆ ಇಂಥ ಹೇಳಿಕೆ ನೀಡುತ್ತಿರಲಿಲ್ಲ ಎಂದು ಕಾಂಗ್ರೆಸ್ ನಾಯಕನ ವಿರುದ್ಧ ಚಾಟಿ ಬೀಸಿದೆ.
‘ರಾಹುಲ್ ವಿರುದ್ಧ ಇಂಥ ಕಠಿಣ ಪದ ಬಳಸಿ ಕಿಡಿಕಾರಿದ ಹೊರತಾಗಿಯೂ ಈ ಹೇಳಿಕೆ ಪ್ರಕರ ಣದಲ್ಲಿ ಕಾಂಗ್ರೆಸ್ ನಾಯಕನ ವಿರುದ್ದ ದಾಖಲಾಗಿದ್ದ ಕ್ರಿಮಿನಲ್ ಮಾನನಷ್ಟ ಪ್ರಕರಣದ ವಿಚಾರಣೆಗೆ ಸುಪ್ರೀಂಕೋರ್ಟ್ ತಡೆ ನೀಡಿದೆ.

