ಹೊಸದಿಲ್ಲಿ : ಐಪಿಎಲ್ ತಂಡಗಳಿಗೆ ಆಟಗಾರರನ್ನು ಖರೀದಿಸುವ ಮೆಗಾ ಹರಾಜು ಪ್ರಕ್ರಿಯೆ ಜೆಡ್ಡಾದಲ್ಲಿ ನಡೆದಿದ್ದು, ಎಲ್ಲ ತಂಡಗಳು ತಮಗೆ ಬೇಕಾದ ಆಟಗಾರರನ್ನು ಕೋಟಿ ಕೋಟಿ ಸುರಿದು ಖರೀದಿಸಿವೆ. ಆದರೆ ಈ ನಡುವೆ ಬಂಗ್ಲಾದೇಶದ ಯಾವೊಬ್ಬ ಆಟಗಾರನನ್ನು ಯಾರೂ ಖರೀದಿಸಿಲ್ಲ ಎಂಬ ವಿಚಾರ ಈಗ ಮುನ್ನೆಲೆಗೆ ಬಂದಿದೆ. ಐಪಿಎಲ್ 2025ರ ಮೆಗಾ ಹರಾಜಿನಲ್ಲಿ ಒಟ್ಟು 1,574 ಆಟಗಾರರು ನೋಂದಾಯಿಸಿಕೊಂಡಿದ್ದರು. ಈ ಪೈಕಿ 574 ಆಟಗಾರರನ್ನು ಹರಾಜಿನಲ್ಲಿ ಆಯ್ಕೆ ಮಾಡಲಾಗಿದ್ದು, ನಂತರ 3 ಆಟಗಾರರನ್ನು ಆಯ್ಕೆ ಮಾಡಲಾಗಿದೆ. ಈ ಮೂಲಕ ಮೆಗಾ ಹರಾಜಿಗೆ 577 ಆಟಗಾರರ ಹೆಸರನ್ನು ಅಂತಿಮಗೊಳಿಸಲಾಗಿದೆ.
ಹರಾಜು ಪಟ್ಟಿಯಲ್ಲಿ 12 ಆಟಗಾರರು ಭಾರತದ ನೆರೆಯ ಬಾಂಗ್ಲಾದೇಶದವರೂ ಆಗಿದ್ದರು ಆದರೆ ಈ ಬಾರಿ ಯಾವುದೇ ಬಾಂಗ್ಲಾದೇಶದ ಕ್ರಿಕೆಟಿಗರು ಹರಾಜಿನಲ್ಲಿ ಮಾರಾಟವಾಗಲಿಲ್ಲ. ಯಾವ ತಂಡವೂ ಬಾಂಗ್ಲಾದೇಶದ ಆಟಗಾರರನ್ನು ಏಕೆ ಖರೀದಿಸಲಿಲ್ಲ? ಎಂಬ ವಿಚಾರ ಈಗ ಬಹಳ ಚರ್ಚೆಯಾಗುತ್ತಿದೆ.
ಇದು ಹಿಂದು ವಿರೋಧಿ ಬಾಂಗ್ಲಾದೇಶಕ್ಕೆ ಭಾರತೀಯರು ಕೊಟ್ಟ ಪಂಚ್ ಎನ್ನಲಾಗಿದೆ. ಸದಾ ಭಾರತ ವಿರೋಧಿ ಭಾವನೆಯಿಂದ ಕುದಿಯುತ್ತಿರುವ ನೆರೆಯ ಪಾಕಿಸ್ಥಾನದ ಕ್ರಿಕೆಟಿಗರಿಗೂ ಐಪಿಎಲ್ ಆಡಲು ಅವಕಾಶ ಕೊಡುವುದಿಲ್ಲ. ಈಗ ಬಾಂಗ್ಲಾ ದೇಶದತ್ತಲೂ ಇದೇ ತಂತ್ರ ಅನುಸರಿಸರಿಸಲಾಗಿದೆ. ಮೂರು ತಿಂಗಳಲ್ಲಿ ಸಿಗುವ ಕೋಟಿ ಕೋಟಿ ಸಂಭಾವನೆ ಕಳೆದುಕೊಂಡಿರುವ ಬಾಂಗ್ಲಾದೇಶದ ಕ್ರಿಕೆಟಿಗರು ಈಗ ಪರಿತಪಿಸುತ್ತಿದ್ದಾರೆ.