ಕುಂದಾಪುರ : ಕ್ರೀಡೆಯಿಂದ ವಿದ್ಯಾರ್ಥಿಗಳಲ್ಲಿ ಕೌಶಲ್ಯಾಭಿವೃದ್ದಿ ಸೃಜನಶೀಲತೆ ಚತುರತೆ ಸಮಯಪ್ರಜ್ಞೆ ಬುದ್ದಿಮತ್ತೆ ವಿಕಸಿತಗೊಳ್ಳುತ್ತದೆ ಎಂದು ಶ್ರೀರಾಮ ವಿದ್ಯಾಕೇಂದ್ರದ ಸಂಚಾಲಕರಾದ ಕೋಡಿ ನಾಗೇಶ್ ಕಾಮತ್ ನುಡಿದರು ಅವರು ಶ್ರೀ ಮೈಲಾರೇಶ್ವರ ಯುವಕ ಮಂಡಲದ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿದರು
ಸೋಲೇ ಗೆಲುವಿನ ಸೋಪಾನವಾಗಿದ್ದು ವಿದ್ಯಾರ್ಥಿಗಳು ಯಾವುದೇ ರೀತಿಯ ಆವೇಶಕ್ಕೆ ಒಳಗಾಗದೇ ಕ್ರೀಡಾಸ್ಪೂರ್ತಿಯಿಂದ ಪಂದ್ಯಗಳಲ್ಲಿ ಭಾಗವಹಿಸಿ ಎಂದು ಕರೆ ನೀಡಿದರು
ವೇದಿಕೆಯಲ್ಲಿ ಸಭಾಧ್ಯಕ್ಷರಾಗಿ ಶ್ರೀ ಮೈಲಾರೇಶ್ವರ ಯುವಕ ಮಂಡಲದ ಅಧ್ಯಕ್ಷರಾದ ಶರತ್ ಕೆ ಎಸ್ ಹಾಗೂ ಮುಖ್ಯ ಅತಿಥಿಗಳಾಗಿ ಮೈಯದ್ದಿ ಗುಲ್ವಾಡಿ, ಪ್ರಸಾದ್ ಶೆಟ್ಟಿ, ಕಾರ್ತಿಕ್ ಕೋಟೆಗಾರ್, ಮಿಥುನ್ ಕುಮಾರ್ ಹಾಗೂ ಕಾರ್ತಿಕ್ ಎಸ್ ಕೆ ಶ್ರೀ ಮೈಲಾರೇಶ್ವರ ಯುವಕ ಮಂಡಲದ ಕಾರ್ಯದರ್ಶಿ ಶ್ರೀನಾಥ್ ಕೋಟೆ ಕ್ರೀಡಾ ಕಾರ್ಯದರ್ಶಿ ಅರುಣ್ ಬಾಣ ಹಾಗೂ ಸಾಂಸ್ಕ್ರತಿಕ ಕಾರ್ಯದರ್ಶಿ ನಾಗರಾಜ್ ದಫೇದಾರ್ ಉಪಸ್ಥಿತರಿದ್ದರು
ಡಿ ಸತೀಶ್ ಹಾಗೂ ವರದರಾಜ್ ಪೈ ಕಾರ್ಯಕ್ರಮ ನಿರೂಪಿಸಿ ಧನ್ಯವಾದವಿತ್ತರು

