173
ಇಂಫಾಲ್ ; 250 ಜನರನ್ನು ಬಲಿ ಪಡೆದ ಜನಾಂಗೀಯ ಸಂಘರ್ಷ ಪೀಡಿತ ಮಣಿಪುರದಲ್ಲಿ ಗುರುವಾರ ಸಂಜೆ ರಾಷ್ಟ್ರಪತಿ ಆಳ್ವಿಕೆ ಘೋಷಣೆ ಮಾಡಲಾಗಿದೆ. ಮುಖ್ಯಮಂತ್ರಿ ಬಿರೇನ್ ಸಿಂಗ್ ರಾಜೀನಾಮೆ ನೀಡಿದ 4 ದಿನ ತರುವಾಯ ಈ ಘೋಷಣೆ ಹೊರಬಿದ್ದಿದೆ.
ಇದೇ ವೇಳೆ 2027ರವರೆಗೆ ಅವಧಿ ಹೊಂದಿರುವ ಮಣಿಪುರ ವಿಧಾನಸಭೆಯನ್ನು ಅಮಾನತಿನಲ್ಲಿ ಇರಿಸಲಾಗಿದೆ ಎಂದು ಕೇಂದ್ರ ಗೃಹ ಸಚಿವಾಲಯ ಹೇಳಿದೆ. ರಾಜ್ಯದಲ್ಲಿ 1951ರ ನಂತರ ರಾಷ್ಟ್ರಪತಿ ಆಡಳಿತ ಜಾರಿಗೆ ಬರುತ್ತಿರುವುದು 11ನೇ ಸಲ.
21 ತಿಂಗಳ ಹಿಂದೆ ರಾಜ್ಯದಲ್ಲಿ ಕುಕಿ ಹಾಗೂ ಮೈತ್ರೇಯಿ ಸಮುದಾಯಗಳ ನಡುವೆ ಮೀಸಲು ವಿಚಾರಕ್ಕೆ ಸಂಬಂಧಿಸಿದಂತೆ ಜನಾಂಗೀಯ ಸಂಘರ್ಷ ಆರಂಭವಾಗಿತ್ತು. ಇದು ಇಂದೂ ನಿಂತಿಲ್ಲ ಹಾಗೂ 250 ಜನರ ಬಲಿಪಡೆದಿದೆ. ಲಕ್ಷಾಂತರ ಜನರನ್ನು ನಿರ್ವಸಿತರನ್ನಾಗಿ ಮಾಡಿದೆ. ಹೀಗಾಗಿ ಸ್ಥಿತಿ ನಿಭಾಯಿಸಲು ಆಗದೇ ವ್ಯಾಪಕ ಟೀಕೆಗೆ ಗುರಿಯಾಗಿದ್ದ ಬಿಜೆಪಿ ನಾಯಕ ಬಿರೇನ್ ಸಿಂಗ್ ಫೆ.9ರಂದು ಸಿಎಂ ಪದವಿ ತ್ಯಜಿಸಿದ್ದರು.

