Home » ಬ್ಯಾಟಿಂಗ್‌ ವೈಫಲ್ಯ : ಸೋತ ಟೀಂ ಇಂಡಿಯಾ
 

ಬ್ಯಾಟಿಂಗ್‌ ವೈಫಲ್ಯ : ಸೋತ ಟೀಂ ಇಂಡಿಯಾ

by Kundapur Xpress
Spread the love

ಗೆಬೆರ್ಹಾ (ದಕ್ಷಿಣ ಆಫ್ರಿಕಾ) : ಭಾರತ ಹಾಗೂ ದಕ್ಷಿಣ ಆಫ್ರಿಕಾ ಟಿ-20 ಸರಣಿಯ ಮೊದಲ ಪಂದ್ಯದಲ್ಲಿ ಬ್ಯಾಟರ್‌ಗಳ ಅಬ್ಬರವನ್ನು ಕಣ್ಣುಂಬಿಕೊಂಡಿದ್ದ ಅಭಿಮಾನಿಗಳು, 2ನೇ ಪಂದ್ಯದಲ್ಲಿ ದ.ಆಫ್ರಿಕಾ ಬೌಲರ್‌ಗಳ ಕರಾರುವಕ್ ದಾಳಿಯಿಂದಾಗಿ ಟೀಂ ಇಂಡಿಯಾ 3 ವಿಕೆಟ್ ವೀರೋಚಿತ ಸೋಲನುಭವಿಸಿತು.

ದ.ಆಫ್ರಿಕಾ ತಂಡದ ಭರ್ಜರಿ ಬೌಲಿಂಗ್ ದಾಳಿ ಹಾಗೂ ಫೀಲ್ಡಿಂಗ್‌ನಿಂದಾಗಿ ಭಾರತ ತತ್ತರಿಸಿದ್ದು ದ.ಆಫ್ರಿಕಾಗೆ 124  ರನ್ನುಗಳ ಸುಲಭ ಗುರಿ ನೀಡಿತ್ತು. ಈ ಹಿಂದೆ ನಡೆದಿದ್ದ ಪಂದ್ಯಗಳಲ್ಲಿ ಭರ್ಜರಿ ಬ್ಯಾಟಿಂಗ್ ಮಾಡುವ ಮೂಲಕ ಎಲ್ಲರ ಚಿತ್ತ ಹರಿಸಿದ್ದ ಭಾರತ ಇದೀಗ ಹರಿಣರ ವಿರುದ್ಧದ ಎರಡನೇ ಪಂದ್ಯದಲ್ಲಿ ಆಘಾತ ಅನುಭವಿಸಿದೆ. ತಮ್ಮ ಫೀಲ್ಡಿಂಗ್ ಮೂಲಕ ಗಮನ ಸೆಳೆದ ದ.ಆಫ್ರಿಕಾ, ಭಾರತದ ಬ್ಯಾಟರ್‌ಗಳನ್ನು ಕಟ್ಟಿ ಹಾಕಲು ಯಶಸ್ವಿಯಾಯಿತು. ಕೈಬೆಹಾದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಭಾರತ ಬೌಲಿಂಗ್ ದಾಳಿಗೆ ಬಸವಳಿದು 6 ವಿಕೆಟ್ ಕಳೆದುಕೊಂಡು 124 ರನ್‌ ಗಳಿಸಿ 125 ರನ್‌ಗಳ ಸುಲಭ ಗುರಿ ನೀಡಿದ್ದು ದ.ಆಫ್ರಿಕಾ 19 ಓವರಗಳಲ್ಲಿ 7 ವಿಕೆಟ್‌ ನಷ್ಟಕ್ಕೆ ಗುರಿ ತಲುಪಿ ವಿಜಯಶಾಲಿಯಾಯಿತು ಈ ಮೂಲಕ ಸತತ 11 ಪಂದ್ಯಗಳ ಭಾರತದ ಜೈತ್ರಯಾತ್ರೆಗೆ ಹರಿಣಗಳು ಬ್ರೇಕ್‌ ನೀಡಿದ್ದಾರೆ  ಇದರೊಂದಿಗೆ ಸರಣಿಯು 1-1 ರಲ್ಲಿ ಸಮಬಲಗೊಂಡಿದೆ

 

Related Articles

error: Content is protected !!