85
ಮುಂಬೈ : 3ನೇ ಆವೃತ್ತಿ ವುಮೆನ್ಸ್ ಪ್ರೀಮಿಯರ್ ಲೀಗ್ (ಡಬ್ಲ್ಯುಪಿಎಲ್)ನ ಫೈನಲ್ ಹಣಾಹಣಿಗೆ ಕ್ಷಣಗಣನೆ ಆರಂಭಗೊಂಡಿದೆ. ಇಲ್ಲಿನ ಬ್ರೆಬೋರ್ನ್ ಕ್ರೀಡಾಂಗಣದಲ್ಲಿ ಶನಿವಾರ ಪ್ರಶಸ್ತಿ ಕದನ ನಡೆಯಲಿದ್ದು, ಟ್ರೋಫಿಗಾಗಿ ಮುಂಬೈ ಇಂಡಿಯನ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ಪರಸ್ಪರ ಸೆಣಸಾಡಲಿವೆ.
ಹರ್ಮನ್‌ಪ್ರೀತ್ ಕೌರ್ ನಾಯಕತ್ವದ ಮುಂಬೈ ತಂಡ ತವರಿನಲ್ಲಿ 2ನೇ ಟ್ರೋಫಿ ಗೆಲ್ಲುವ ಕಾತರದಲ್ಲಿದೆ. ಆಸ್ಟ್ರೇಲಿಯಾದ ಮೆಗ್ ಲ್ಯಾನಿಂಗ್ ಸಾರಥ್ಯದ ಡೆಲ್ಲಿ ತಂಡ ಕಳೆದೆರಡು ಬಾರಿಯ ಫೈನಲ್ ಸೋಲಿನ ಕಹಿ ನೆನಪನ್ನು ಮರೆತು ಚೊಚ್ಚಲ ಪ್ರಶಸ್ತಿ ಮುಡಿಗೇರಿಸಿ ಕೊಳ್ಳುವ ವಿಶ್ವಾಸದಲ್ಲಿದೆ.
ರೋಚಕ ಪೈಪೋಟಿ :
ಡಬ್ಲ್ಯುಪಿಎಲ್‌ನ ಒಟ್ಟಾರೆ ದಾಖಲೆ ಹಾಗೂ ಈ ಬಾರಿ ಟೂರ್ನಿಯ ಪ್ರದರ್ಶನ ಗಮನಿಸಿದರೆ ಮುಂಬೈ ತಂಡ ಟ್ರೋಫಿ ಗೆಲ್ಲುವ ಫೇವರಿಟ್ ಎನಿಸಿದರೂ, ಡೆಲ್ಲಿ ಪ್ರಬಲ ಪೈಪೋಟಿ ನೀಡುವುದು ಖಚಿತ. ಶೀವರ್ ಬ್ರಂಟ್ ಹಾಗೂ ಹೇಲಿ ಮ್ಯಾಧೂಸ್ ಮುಂಬೈನ ಆಧಾರಸ್ತಂಭ. ಶೀವರ್ ಈ ಸಲ 493 ರನ್ ಕಲೆಹಾಕಿದ್ದು, ಗರಿಷ್ಠ ರನ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ

