Home » ಭಾರತ ವಿರಾಟ್‌ ರೂಪ ಫೈನಲ್ ಪ್ರವೇಶ
 

ಭಾರತ ವಿರಾಟ್‌ ರೂಪ ಫೈನಲ್ ಪ್ರವೇಶ

by Kundapur Xpress
Spread the love

ಬೆಂಗಳೂರು : ವಿರಾಟ್ ಕೊಹ್ಲಿ ಅವರ ಅಮೋಘ ಶತಕ ಹಾಗೂ ಬೌಲರ್ ಮಹಮ್ಮದ್ ಶಮಿ ಅವರ ಅಮೋಘ ಬೌಲಿಂಗ್‌ ನೆರವಿನಿಂದ ಭಾರತ ಕ್ರಿಕೆಟ್ ತಂಡ ನ್ಯೂಜಿಲ್ಯಾಂಡ್ ವಿರುದ್ಧ 70 ರನ್ನುಗಳ ಭರ್ಜರಿ ಗೆಲುವು ಸಾಧಿಸಿ ವಿಶ್ವಕಪ್ ಫೈನಲ್ ಗೆ ಪ್ರವೇಶಿಸಿದೆ ನ್ಯೂಜಿಲ್ಯಾಂಡ್ ಈ ಸೋಲಿನೊಂದಿಗೆ ಟೂರ್ನಿಂದ ಹೊರಬಿದ್ದಿದೆ ಮುಂಬೈನ ವಾಂಖೆಡೆ ಮೈದಾನದಲ್ಲಿ ನಡೆದ ವಿಶ್ವಕಪ್ ಮೊದಲ ಸೆಮಿಫೈನಲಿನಲ್ಲಿ ಟಾಸ್ ಗೆದ್ದು ಭಾರತ ಮೊದಲು ಬ್ಯಾಟಿಂಗ್ ಅನ್ನು ಆಯ್ಕೆಮಾಡಿಕೊಂಡಿತು ಭಾರತ 50 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 397 ರನ್‌ ಗಳಿಸಿತು ನ್ಯೂಜಿಲೆಂಡ್ 48.5 ಓವರ್ ಗಳಲ್ಲಿ 327 ರನ್‌ ಗಳಿಸಿ ಆಲ್ಔಟ್ ಆಯಿತು ಭಾರತ ತಂಡ ನವಂಬರ್ 19 ರಂದು ವಿಶ್ವಕಪ್ ಫೈನಲ್ ಪಂದ್ಯವನ್ನು ಎದುರಿಸಲಿದೆ

ವಿರಾಟ್ ಕೊಹ್ಲಿ ಅವರು ಏಕದಿನ ಕ್ರಿಕೆಟ್ ನಲ್ಲಿ 50 ನೇ ಶತಕವನ್ನು ಸಿಡಿಸಿ ವಿಶ್ವದಾಖಲೆ ಮಾಡಿದ್ದಾರೆ ಈ ಸಾಧನೆ ಮಾಡಿದ ವಿಶ್ವದ ಮೊದಲ ಆಟಗಾರ ಎಂಬ ಹಿರಿಮೆಗೆ ಅವರು ಪಾತ್ರರಾಗಿದ್ದಾರೆ ಸಚಿನ್ ತೆಂಡೂಲ್ಕರ್ ಅವರ 49 ಏಕದಿನ ಶತಕವನ್ನು ಅವರು ಮುರಿದು ಈ ದಾಖಲೆಯನ್ನು ಮಾಡಿದ್ದಾರೆ ಇಂದು ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧ ಎರಡನೇ ಸೆಮಿಫೈನಲ್ ಪಂದ್ಯ ಮಧ್ಯಾಹ್ನ 2 ಗಂಟೆಗೆ ಆರಂಭವಾಗಲಿದೆ

 

Related Articles

error: Content is protected !!