173
ಧರ್ಮಸ್ಥಳ : ಅನನ್ಯಾ ಭಟ್ ಕುರಿತು ತಾವು ಬಿಡುಗಡೆ ಮಾಡಿದ್ದ ಫೋಟೋ ಕೂಡ ನಕಲಿ. ಮಾಧ್ಯಮಗಳು ಅನನ್ಯಾ ಭಟ್ ಫೋಟೋ ನೀಡಲು ಒತ್ತಡ ಹೇರಿದ್ದರಿಂದಾಗಿ ನನ್ನ ಬಳಿ ಇದ್ದ ಯಾವುದೋ ಫೋಟೋವನ್ನು ನೀಡಿದೆ. ಆದರೆ ಆ ಫೋಟೋ ವಾಸಂತಿಯದ್ದಾಗಿತ್ತು ಎಂದು ಸುಜಾತಾ ಭಟ್ ಅವರು ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಅನನ್ಯಾ ಭಟ್ ಎಂದು ಸುಜಾತಾ ಅವರು ಬಿಡುಗಡೆ ಮಾಡಿದ್ದ ಫೋಟೋ ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು. ಬೇರೆ ಫೋಟೋ ತೋರಿಸಿ ಅದು ಅನನ್ಯಾ ಭಟ್‌ದು ಎಂದು ಸುಜಾತಾ ಹೇಳುತ್ತಿದ್ದಾರೆ ಎಂಬ ಗಂಭೀರ ಆರೋಪಗಳು ಕೇಳಿ ಬಂದಿದ್ದವು.

