Home » ರಾಜ್ಯ ಸರ್ಕಾರದಿಂದ ದೃಷ್ಠಿ ಗ್ಯಾರೆಂಟಿ ಯೋಜನೆ
 

ರಾಜ್ಯ ಸರ್ಕಾರದಿಂದ ದೃಷ್ಠಿ ಗ್ಯಾರೆಂಟಿ ಯೋಜನೆ

by Kundapur Xpress
Spread the love

ಬೆಂಗಳೂರು : ಅಂಧತ್ವ ಮುಕ್ತ ಕರ್ನಾಟಕ ಉದ್ದೇಶದಿಂದ ರಾಜ್ಯ ಸರ್ಕಾರ ಜಾರಿಗೆ ತಂದ ಆಶಾಕಿರಣ ಯೋಜನೆಯಡಿ ರಾಜ್ಯಾದ್ಯಂತ 393 ಶಾಶ್ವತ ದೃಷ್ಟಿ ಕೇಂದ್ರಗಳಿಗೆ ಡಿಸಿಎಂ ಡಿ.ಕೆ.ಶಿವಕುಮಾರ್ ಚಾಲನೆ ನೀಡಿದ್ದಾರೆ.

ಗೋವಿಂದರಾಜ ನಗರ ಕ್ಷೇತ್ರದ ಬಿಬಿಎಂಪಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಗುರುವಾರ ದೃಷ್ಟಿ ಕೇಂದ್ರ ಉದ್ಘಾಟಿಸಿ ಮಾತನಾಡಿದ ಅವರು, ದೃಷ್ಟಿ ಸಮಸ್ಯೆಗೆ ಒಳಗಾಗುವವರಿಗೆ ಚಿಕಿತ್ಸೆ ನೀಡುವ ‘ದೃಷ್ಟಿ ಗ್ಯಾರಂಟಿಯನ್ನು ಆಶಾಕಿರಣ ಯೋಜನೆ ಮೂಲಕ ಕಾಂಗ್ರೆಸ್ ಸರ್ಕಾರ ನೀಡುತ್ತಿದೆ. ರಾಜ್ಯದಾದ್ಯಂತ 393 ಕಡೆ ಆಶಾಕಿರಣ ದೃಷ್ಟಿ ಕೇಂದ್ರಗಳ ಉದ್ಘಾಟನೆಯಾಗುತ್ತಿದೆ. ಉಚಿತವಾಗಿ ಕನ್ನಡಕ ನೀಡಲಾಗುತ್ತಿದೆ. ಜನರಿಗೆ ಇದರಿಂದ ಸಾವಿರಾರು ರುಪಾಯಿ ಉಳಿಯಲಿದೆ ಎಂದು ತಿಳಿಸಿದರು

 

Related Articles

error: Content is protected !!