Home » ಬೈಂದೂರು ಠಾಣಾ ವ್ಯಾಪ್ತಿಯಲ್ಲಿ ದನ ಕಳವು
 

ಬೈಂದೂರು ಠಾಣಾ ವ್ಯಾಪ್ತಿಯಲ್ಲಿ ದನ ಕಳವು

by Kundapur Xpress
Spread the love

ಬೈಂದೂರು : ಇಲ್ಲಿನ ಉಪ್ಪುಂದ ಗ್ರಾಮದ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಮುಖ ಮಂಟಪದ ಎದುರಿನ ಗ್ಯಾರೇಜಿನಲ್ಲಿ ಮಲಗಿಕೊಂಡಿರುವ ದನವನ್ನು ರಾತ್ರಿ ಕಳ್ಳರು ಕಳ್ಳತನ ಮಾಡಿರುವ ಬಗ್ಗೆ ಬೈಂದೂರು ಠಾಣೆಯಲ್ಲಿ ದೂರು ದಾಖಲಾಗಿದೆ.

ಮಣಿರಾಜ (27) ಎಂಬವರು ನೀಡಿದ ದೂರಿನಂತೆ, ಬನಶಂಕರಿ ಆಟೋ ವರ್ಕ್ಸ್‌ನಲ್ಲಿರುವ ಸಿಸಿಟಿವಿ ಕ್ಯಾಮರಾವನ್ನು ಪರಿಶೀಲಿಸಿದ್ದು, ಜು. 2 ರಂದು ಬೆಳಗಿನ ಜಾವ 2.40ಕ್ಕೆ ಇಕೋ ಸ್ಪೋರ್ಟ್ಸ್ ಕಾರಿನಲ್ಲಿ ಬಂದ ಮೂರು ಜನ ವ್ಯಕ್ತಿಗಳು ಬನಶಂಕರಿ ಗ್ಯಾರೇಜಿನ ಒಳಗೆ ಮಲಗಿರುವ ದನವನ್ನು ಕಳವು ಮಾಡಿಕೊಂಡು ಕಾರಿನಲ್ಲಿ ಹಿಂಸಾತ್ಮಕವಾಗಿ ತುಂಬಿಸಿಕೊಂಡು ಹೋಗಿರುವುದು ಕಂಡು ಬರುತ್ತದೆ ಎಂದು ದೂರಿನಲ್ಲಿ ವಿವರಿಸಲಾಗಿದೆ

 

Related Articles

error: Content is protected !!